ಉಡುಪಿ: ರೋಟರಿ ಕ್ಲಬ್ ಮಣಿಪಾಲ ಮತ್ತು ರೋಟರಿ ಕ್ಲಬ್ ಉಡುಪಿ ಇದರ ಜಂಟಿ ಸಭೆಯು ರೋಟರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಡಾ. ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಕಿರಣ್ ಉಮಾಕಾಂತ್ ಭಾಗವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ಡಾ. ಹೆಚ್.ಗೌರಿ, ವಲಯ ಸಹಾಯಕ ಗವರ್ನರ್ ಡಾ. ಸುರೇಶ್ ಶೆಣ್ಯ್, ಡಾ. ಗಿರಿಜಾ, ಮಣಿಪಾಲ ರೋಟರಿ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ರೋಟರಿ ಉಡುಪಿ ಅಧ್ಯಕ್ಷ ಹೇಮಂತ್ ಕಾಂತ್, ರಾಜವರ್ಮ ಅರಿಗ, ಕಾರ್ಯದರ್ಶಿಗಳಾದ ರೆಹಮಾನ್, ಗೋಪಾಲಕೃಷ್ಣ ಪ್ರಭು ಮುಂತಾದವರಿದ್ದರು.
ರೋಟರಿ ಕ್ಲಬ್ ಮಣಿಪಾಲದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಈಗಾಗಲೇ ಟೈಲರಿಂಗ್ ತರಬೇತಿ ಪಡೆದ ಪ್ರಶಾಂತಿ ಉಪಾಧ್ಯಾಯ, ಶ್ರೀಲತ ಆಚಾರ್ಯ, ಆಶಾ ನಿಲಯದ 7 ಆಶ್ರಮವಾಸಿಗಳಿಗೆ 4 ಟೈಲರಿಂಗ್ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು.
2 ಸಾವಿರಕ್ಕೂ ಮಿಕ್ಕಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ಡಾ. ಶಶಿಕಿರಣ್ ಉಮಾಕಾಂತ್ ಮತ್ತು ಡಾ. ಶಶಿಕಲಾ ರವರನ್ನು ರೋಟರಿ ಮಣಿಪಾಲದ ವತಿಯಿಂದ ಸನ್ಮಾನಿಸಲಾಯಿತು.