ಕೊಲ್ಲೂರು: ಕೊಲ್ಲೂರಿನ ಅಂಬಿಕಾ ಹೊಟೇಲಿನಿಂದ ಹಣ ಕಳವಾದ ಘಟನೆ ನಡೆದಿದೆ. ಶ್ರೀಜಿತ್ ಪಿ ಆರ್ ಇವರು ಜ. 8 ರಂದು ಮಧ್ಯಾಹ್ನದ ಹೊತ್ತಿಗೆ ಬಂದ್ ಮಾಡಿ ಬೀಗ ಹಾಕಿ ಹೋಗಿದ್ದು ಜ. 9 ರಂದು ಬೆಳಿಗ್ಗೆ 6 ಗಂಟೆಗೆ ಹೊಟೇಲಿಗೆ ಬಂದು ನೋಡಿದಾಗ ಹೊಟೇಲ್ ಹಿಂಬದಿಯ ಸ್ಟೇರ್ ಕೇಸ್ ನಿಂದ ಬಂದು ಹಿಂಬದಿ ಬಾಗಿಲಿಗೆ ಹಾಕಿದ ಚಿಲ್ಕವನ್ನು ಒಳಗಿನಿಂದ ತೆಗೆದು ಹಣದ ಡ್ರಾವರ್ ನಲ್ಲಿದ್ದ ರೂ. 560 ಹಣವನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರು: ಹೊಟೇಲಿನಲ್ಲಿ ಕಳವು

ಕೊಲ್ಲೂರು: ಹೊಟೇಲಿನಲ್ಲಿ ಕಳವು
Date: