ಕಾರ್ಕಳ: ಯೂತ್ ಫಾರ್ ಸೇವಾ ಉಡುಪಿ ತಂಡದ ಆಶ್ರಯದಲ್ಲಿ ಯುವ ಸ್ಪಂದನ ಗೆಳೆಯರ ಬಳಗ ಮತ್ತು ತರುಣ ಭಾರತ ತಂಡ ಹೆರ್ಮುಂಡೆ ಇವರ ಸಹಯೋಗದೊಂದಿಗೆ ವಿಶ್ವ ನದಿ ದಿನಾಚರಣೆಯ ಪ್ರಯುಕ್ತ ದುರ್ಗಾ ಗ್ರಾಮದ ಮುಂಡ್ಲಿ ಡ್ಯಾಮ್ ನಲ್ಲಿ ಸ್ಥಳೀಯ ಯುವಕರಿಗೆ ನದಿ ಸ್ವಚ್ಛತೆ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ನದಿ ದಡದಲ್ಲಿ ಔಷದೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ನದಿ ಸಂರಕ್ಷಣೆ ಮತ್ತು ಪರಿಸರ ಪರ್ಯಾವರಣದ ಜಿಲ್ಲಾ ಸಂಯೋಜಕರು ನಿಟ್ಟೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಸುರೇಂದ್ರ ಶೆಟ್ಟಿ ಹಸಿರುಮನೆ, ಇಕೋ ಬ್ರಿಕ್ಸ್, ಹಾಗೂ ನದಿಯ ಸುತ್ತ ಮುತ್ತಲು ಆಯುರ್ವೇದಿಕ್ ಸಸಿಗಳನ್ನು ನೆಟ್ಟಲ್ಲಿ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.
ದುರ್ಗಾ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯಕ್ ಹಾಗೂ ಯೂತ್ ಫಾರ್ ಸೇವಾ ಸದಸ್ಯರಾದ ರಮಿತಾ ಶೈಲೇಂದ್ರ, ಹೆರ್ಮುಂಡೆ ಸತೀಶ್ ಹೆಗ್ಡೆ, ಯುವ ಸ್ಪಂದನ ಮತ್ತು ತರುಣ ಭಾರತದ ತಂಡದ ಸದಸ್ಯರು ಉಪಸ್ಥಿತರಿದ್ದರು.