ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ ಸರಣಿ ಗೋಕಳ್ಳತನ ಆಗುತ್ತಿದ್ದು ಜನಜಾಗ್ರತಿ ಸಭೆ ಧರಣಿಗಳು ನಡೆಯುತ್ತಿದ್ದರೂ ಸಂಘಟನೆಯ ಯುವಕರು ರಾತ್ರಿ ಇಡೀ ಕಾದರೂ ಅವರ ಕಣ್ಣು ತಪ್ಪಿಸಿ ಗೋಸಾಗಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಬೇಸರದ ಸಂಗತಿ. ಗೋಕಳ್ಳರನ್ನು ಹಿಡಿಯುವಲ್ಲಿ ಅವರಿಗೆ ಸಹಕರಿಸುತ್ತಿರುವ ದಲ್ಲಾಲಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ಸಂಬಂಧಪಟ್ಟ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹೇಳಿದ್ದಾರೆ.
ಗೋಸೇವೆ ಜೊತೆಗೆ ಗೋ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ರಾಜ್ಯದಲ್ಲಿ ಜಾರಿಗೆ ಬಂದಿರುವ ಗೋಹತ್ಯಾ ನಿಷೇದ ಕಾನೂನು ಹಲ್ಲುಕಿತ್ತ ಹಾವಿನಂತಾಗಿದೆ. ಸರ್ಕಾರ, ಜಿಲ್ಲಾಡಳಿತ, ಪೋಲಿಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದಲ್ಲಿ ಅತಿ ಶೀಘ್ರ ಜಿಲ್ಲಾದ್ಯಂತ ಹಿಂದೂಪರ ಸಂಘಟನೆಗಳ ಜೊತೆಗೆ ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಲಾಗುವುದು ಎಂದು ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.