ಉಡುಪಿ: ಮಂಥನ – ಚಿಂತನ ವೈಚಾರಿಕ ವೇದಿಕೆ ಇದರ ವತಿಯಿಂದ ಸ್ವರಾಜ್ಯ 75 – ಸ್ವಾತಂತ್ರ್ಯ ಹೋರಾಟ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಕಲ್ಪನೆ ಎಂಬ ವಿಷಯದಲ್ಲಿ ಮಣಿಪಾಲದ ಟ್ಯಾಪ್ಮಿ ಸಂಸ್ಥೆಯ ಸಹ ಪ್ರಾಧ್ಯಾಪಕರಾದ ನಂದನ್ ಪ್ರಭು ಅವರು ಉಪನ್ಯಾಸ ಹಾಗೂ ಸಂವಾದವನ್ನು ನಡೆಸಿಕೊಟ್ಟರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘ ಚಾಲಕರಾದ ನಾರಾಯಣ ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು.
ಭಾಗ್ಯ ಭಟ್ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಮಂಜುಳಾ ಪ್ರಸಾದ್ ರವರು ಮಂಥನದ ಪರಿಚಯ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸ ಮತ್ತು ಸಂವಾದದ ಬಳಿಕ ಪ್ರಮೋದ್ ತಂತ್ರಿ ವಂದಿಸಿದರು. ಶಕುಂತಲಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಹಲವಾರು ಸಾಹಿತಿಗಳು, ಚಿಂತಕರು, ಪತ್ರಕರ್ತರು, ಹಿರಿಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.