ಮಣಿಪಾಲ: ಪಡಿ ಸಂಸ್ಥೆ ಮಂಗಳೂರು, 80 ಬಡಗಬೆಟ್ಟು ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಮತ್ತು ಮಕ್ಕಳ ಬಜೆಟ್ ಕುರಿತು ತರಬೇತಿಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವಿ ಎಸ್ ಆಚಾರ್ಯ ಇವರು ಮಕ್ಕಳು ದೇಶದ ಭವಿಷ್ಯ. ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವರ್ಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಡಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು, ಶಿಕ್ಷಣ ಹಕ್ಕು ಕಾಯಿದೆಯನ್ನು ಅನುಷ್ಠಾನ ಸಮರ್ಪಕವಾಗಿ ಅನುಷ್ಠಾನವನ್ನು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
=ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ 80 ಬಡಗುಬೆಟ್ಟು ಗ್ರಾಮ ಪಂಚಾಯತ್ ನಲ್ಲಿ, ಶಿಕ್ಷಣ ಹಕ್ಕು ಕಾಯಿದೆಯ, ಅಧ್ಯಾಯ-3 ಸೆಕ್ಷನ್ 9ರಡಿಯಲ್ಲಿ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯ ಮಕ್ಕಳ ಅಂಕಿ ಅಂಶಗಳ ಮಾಹಿತಿಯನ್ನು ನಿರ್ವಹಿಸುತ್ತಿದೆ ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಲಾಗಿದೆ. ಆರ್.ಟಿ.ಇ ಕಾಯ್ದೆಯನ್ನು ಸ್ಥಳೀಯ ಭಾಷೆಯಲ್ಲಿ ಪಂಚಾಯತ್ ಆವರಣದಲ್ಲಿ ಪ್ರದರ್ಶಿಸಲಾಗಿದೆ. ಈ ಪೋಸ್ಟರ್ ನ್ನು ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.
ಪಡಿ ಮಂಗಳೂರು ಮತ್ತು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ ಮೈಸೂರು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎಚ್ ಜಯವಂತ ರಾವ್ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ನೀಡಿದರು.
ಉಪಧ್ಯಾಕ್ಷರಾದ ನಿರುಪಮಾ ಎಸ್ ಹೆಗ್ಡೆ, ಕಾರ್ಯದರ್ಶಿ ಶಂಕುತಳಾ ಶೆಟ್ಟಿ, ಸದಸ್ಯರಾದ ಕೆ. ಶಾಂತರಾಮ್ ಶೆಟ್ಟಿ, ಶಾಂತ, ಉಷಾ, ರೂಪಾ ನಾಯಕ್, ಕೇಶವ್ ಕೋಟ್ಯಾನ್, ನೊಯಲ್ ಜೆ ವಾಸ್, ಸುರೇಶ್ ಶೆಟ್ಟಿ, ಅಂಗನಾಡಿ ಕಾರ್ಯಕರ್ತೆಯವರಾದ ಭಾರತಿ, ವನಿಷ ಶೆಟ್ಟಿ, ಆಶಾ, ರಾಧಿಕಾ ಆರ್, ಮಂಜುಳಾ, ಆಶಾ ಕಾರ್ಯಕರ್ತೆ ಸಬಿತಾ, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಡಿ ಮಂಗಳೂರು ಜಿಲ್ಲಾ ಸಂಯೋಜಕ ವಿವೇಕ್, ತೆಂಕನಿಡಿಯೂರು ಕಾಲೇಜಿನ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿ ರಮೇಶ್ ಉಪಸ್ಥಿತರಿದ್ದರು.