ಉಡುಪಿ: ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್(ರಿ) 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ರಾಜ್ಯಮಟ್ಟದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶಿವಕುಮಾರ ಅಳಗೋಡು ರಚಿಸಿದ ‘ಯವಕ್ರೀತ ವೃತ್ತಾಂತ’ ಪ್ರಸಂಗಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿದ್ದು, ವಾರ್ಷಿಕೋತ್ಸವದಂದು ಪ್ರಶಸ್ತಿ ಫಲಕ ಹಾಗೂ 5 ಸಾವಿರ ರೂ. ನಗದನ್ನು ನೀಡಿ ಗೌರವಿಸಲಾಯಿತು.
ಹಿರಿಯ ಸಾಹಿತಿಗಳಾದ ಬಿ.ಆರ್. ಲಕ್ಷ್ಮಣ ರಾವ್, ಡಾ. ಆನಂದ ರಾಮ ಉಪಾಧ್ಯ, ರಾಜಶೇಖರ ಜೋಗಿನಮನೆ, ಮದ್ದಳೆ ವಾದಕರಾದ ಕವ್ವಾಳೆ ಗಣಪತಿ ಭಾಗವತ ಉಪಸ್ಥಿತರಿದ್ದರು.
ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ನಡೆಸಿದ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಇವರ ‘ದೇವಸೇನಾ ಪರಿಣಯ’ ಪ್ರಸಂಗಕ್ಕೆ ಪ್ರಥಮ ಪ್ರಶಸ್ತಿ ಲಭಿಸಿತ್ತು.