ಉಡುಪಿ: ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಹಾಗೂ ಟೀಮ್ ನೇಶನ್ ಫಸ್ಟ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಇದರ ಸಹಭಾಗಿತ್ವದಲ್ಲಿ ಇಂದು ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿದಿಯೂರು ಸಂಕೇಶ ವಿಠೋಭ ಭಜನಾ ಮಂದಿರದ ಬಳಿ ಸುಮಾರು 5 ಎಕರೆ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಶಾಸಕ ಕೆ. ರಘುಪತಿ ಭಟ್ ರವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಟೀಮ್ ನೇಶನ್ ಫಸ್ಟ್ ತಂಡ ಹಾಗೂ ತೆಂಕನಡಿಯೂರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕೇದಾರೋತ್ಥಾನ ಟ್ರಸ್ಟಿನಿಂದ ನಡೆಯುತ್ತಿರುವ ಎಲ್ಲಾ ಕೃಷಿ ಚಟುವಟಿಕೆಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಇಂದು ಟೀಮ್ ನೇಶನ್ ಫಸ್ಟ್ ಉಡುಪಿ ಹಾಗೂ ತೆಂಕನಡಿಯೂರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯವರು ಹಡಿಲು ಭೂಮಿಯನ್ನು ಗುರುತಿಸಿ ಕೃಷಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿಣಿ, ಸಂಕೇಶ ವಿಠೋಭ ಮಂದಿರದ ಅಧ್ಯಕ್ಷರಾದ ವೆಂಕಟರಮಣ ಕಿದಿಯೂರು, ಕೇದಾರೋತ್ಥಾನ ಟ್ರಸ್ಟ್ ನ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಸಂತಿ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂದಿರದ ಕಾರ್ಯದರ್ಶಿಗಳಾದ ರಾಮದತ್, ತೆಂಕನಿಡಿಯೂರು ಕಾಲೇಜಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಸುಷ್ಮಾ, ನೇಶನ್ ಫಸ್ಟ್ ತಂಡದ ಸೂರಜ್ ಮುಂತಾದವರು ಉಪಸ್ಥಿತರಿದ್ದರು.