ಉಡುಪಿ: ಮಂಗಳೂರು ವಿಶ್ವದ್ಯಾನಿಲಯ, ದೈಹಿಕ ಶಿಕ್ಷಣ ವಿಭಾಗ ಹಾಗೂ ಡಾ. ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ 2021-22ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳ ಲಾನ್ ಟೆನಿಸ್ ಟೂರ್ನ್ಮೆಂಟ್ ಉಡುಪಿಯ ಅಜ್ಜರಕಾಡು ಟೆನಿಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಿತು.
ಸಾಮಾನ್ಯ ವಿಭಾಗದ ಸಿಂಗಲ್ಸ್ ನಲ್ಲಿ ಡಾ. ರಾಮಚಂದ್ರ ಪಾಟ್ಕರ್ ವಿಜೇತರಾದರೆ, ಡಾ. ಕಿಶೋರ್ ಕುಮಾರ್ ಸಿ.ಕೆ. ರನ್ನರ್ ಅಪ್ ಆದರು. ಡಬಲ್ಸ್ ವಿಭಾಗದಲ್ಲಿ ಡಾ. ರಾಮಚಂದ್ರ ಪಾಟ್ಕರ್ ಮತ್ತು ಡಾ. ವೆಂಕಟೇಶ ಎಚ್.ಕೆ. ವಿಜೇತರಾದರೆ, ಡಾ. ಕಿಶೋರ್ ಕುಮಾರ್ ಸಿ.ಕೆ. ಮತ್ತು ರಂಜಿತ್ ಜೋಡಿಯು ರನ್ನರ್ ಅಪ್ಪ್ ಆದರು. 45 ವರ್ಷ ಮೇಲ್ಪಟ್ಟವರ ಸಿಂಗಲ್ಸ್ ವಿಭಾಗದಲ್ಲಿ ಡಾ. ಕಿಶೋರ್ ಕುಮಾರ್ ಸಿ.ಕೆ. ವಿಜೇತರಾದರೆ, ಡಾ. ರಾಮಚಂದ್ರ ಪಾಟ್ಕರ್ ರನ್ನರ್ ಅಪ್ ಆದರು.