Sunday, January 19, 2025
Sunday, January 19, 2025

ಹಡಪದ ಅಪ್ಪಣ್ಣನವರ ವಚನಗಳ ಕುರಿತು ಅರಿವು ಮೂಡಿಸುವ ಕೆಲಸ ಸ್ವಾಗತಾರ್ಹ: ಡಾ. ಸುರೇಶ್ ರೈ

ಹಡಪದ ಅಪ್ಪಣ್ಣನವರ ವಚನಗಳ ಕುರಿತು ಅರಿವು ಮೂಡಿಸುವ ಕೆಲಸ ಸ್ವಾಗತಾರ್ಹ: ಡಾ. ಸುರೇಶ್ ರೈ

Date:

ಉಡುಪಿ: ಮಹಾನ್ ವ್ಯಕ್ತಿಗಳ ಜಯಂತಿಯ ಆಚರಣೆಯನ್ನು ಸರಕಾರ ಈ ಹಿಂದಿನಿAದಲೂ ಆಚರಿಸಿಕೊಂಡು ಬರುತ್ತಿದೆ. ಶಿವಶರಣರಲ್ಲಿ ಹಡಪದ ಅಪ್ಪಣ್ಣರ ಬಗ್ಗೆ ಯಾರಿಗೂ ತಿಳಿಯದೇ ಇರುವಾಗ ಸರಕಾರ ಮುಂದೆ ಬಂದು ಅವರ ಹಾಗೂ ಅವರ ವಚನಗಳ ಕುರಿತು ಎಲ್ಲರಲ್ಲಿಯೂ ಅರಿವು ಮೂಡಿಸುವ ಕೆಲಸ ಸ್ವಾಗತಾರ್ಹ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ ಹೇಳಿದರು.

ಅವರು ಇಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವ ಪ್ರಿಯ ಕೂಡಲಚೆನ್ನ ಬಸವಣ್ಣ ಇವರ ಅಂಕಿತನಾಮವಾಗಿದ್ದು, ಕಾಯಕ ಮಾಡದೇ ದಾಸೋಹನ ಮಾಡುವಂತಿಲ್ಲ ಎಂಬ ತತ್ವ ಪಾಲಿಸಿ, ಕಾಯಕಕ್ಕೆ ಮಹತ್ವದ ಸ್ಥಾನ ನೀಡಿದ್ದರು. 12 ನೇ ಶತಮಾನದ ಶರಣರ ಕಾಲದಲ್ಲಿ ಅವರನ್ನು ಗುರುತಿಸಿದ್ದರೂ ಕೂಡ ಇಂದಿಗೆ ಅವರ ಬಗ್ಗೆ ಯಾರಲ್ಲಿಯೂ ಮಾಹಿತಿ ಇಲ್ಲವಾಗಿದೆ. ಹಾಗಾಗಿ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಸಂಶೋಧಿಸಿ, ವಿಷಯಗಳನ್ನು ಕಲೆ ಹಾಕಿ, ಅದನ್ನು ಇತರರಿಗೂ ತಿಳಿಸುವ ಕೆಲಸವಾಗಬೇಕು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಗಂಭೀರವಾಗಿ ಅಭ್ಯಸಿಸಬೇಕು ಎಂದರು.

ನಿವೃತ್ತ ಕನ್ನಡ ಉಪನ್ಯಾಸಕಿ ಹಾಗೂ ಲೇಖಕಿ ಡಾ. ರೇಖಾ ವಿ ಬನ್ನಾಡಿ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣ ರವರ ಕುರಿತು ಉಪನ್ಯಾಸ ನೀಡಿ, 12 ನೇ ಶತಮಾನದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿಯಾದಂತೆ ಆರ್ಥಿಕ ಸ್ಥಿತಿಯು ಬೆಳವಣಿಗೆಗೊಂಡಿತು. ಈ ಬೆಳವಣಿಗೆಯಿಂದ ಹೊಸ ಚಿಂತನೆಗಳು ರೂಪುಗೊಂಡವು. ಈ ಹೊಸ ಹೊಸ ಚಿಂತನೆಗಳನ್ನು ಜನ ಸಾಮಾನ್ಯರಿಗೆ ತಿಳಿಸಲು ಮುಂದಾದಾಗ ತಡೆಯಾದಂತಹ ಸ್ಥಾಪಿತ ಕಂದಾಚಾರಗಳ ಮಧ್ಯೆ ಉಂಟಾದ ಘರ್ಷಣೆಯಿಂದ ವಚನ ಚಳುವಳಿ ಉಂಟಾಗಿ, ವಚನ ಸಾಹಿತ್ಯಕ್ಕೆ ನಾಂದಿಯಾಯಿತು ಎಂದರು.

ವಚನಕಾರರು ಕಾಯಕವನ್ನು ಗೌರವಿಸುವವರು ಹಾಗೂ ಕಾಯಕದಿಂದಲೇ ತಮ್ಮöನ್ನು ತಾವು ಗುರುತಿಸಿಕೊಂಡವರು. ಶ್ರೇಷ್ಠ ವಚನಕಾರರೆಲ್ಲರೂ ತಮ್ಮ ಕಸುಬು ಹಾಗೂ ವೃತ್ತಿಯನ್ನು ಆತ್ಮ ಜಾಗೃತಿಯ ಅಸ್ತçವನ್ನಾಗಿ ಬಳಸಿಕೊಂಡವರು. ವೃತ್ತಿಯಿಂದ ವ್ಯಕ್ತಿಯನ್ನು ಹಾಗೂ ವ್ಯಕ್ತಿತ್ವವನ್ನು ಅಳೆಯುವ ಕೀಳು ಪ್ರಕ್ರಿಯೆಯನ್ನು ನಿರಾಕರಿಸಿ, ಭಿನ್ನವಾಗಿ ಜಗತ್ತನ್ನು ನೋಡುವ ನೋಟಕೊಟ್ಟು, ಮನುಷ್ಯನಿಗೆ ಹುಟ್ಟು, ಕುಲ ಹಾಗೂ ವೃತ್ತಿ ಮುಖ್ಯವಲ್ಲವೆಂದು ಸಾರಿದವರು ಎಂದರು.

ಹಡಪದ ಅಪ್ಪಣ್ಣ ಅನುಭವ ಮಂಟಪದ ಒಬ್ಬ ಸಕ್ರೀಯ ಸದಸ್ಯರಾಗಿದ್ದು, ಬಸವಣ್ಣನವರ ನಿಕಟವರ್ತಿಯಾಗಿದ್ದರು. ಪತ್ನಿ ಲಿಂಗಮ್ಮ ಶಿವಶರಣೆ ಹಾಗೂ ವಚನ ಕಾರ್ತಿಯಾಗಿದ್ದರು. 1160 ಅಪ್ಪಣ್ಣನ ಕಾಲ ಎಂದು ತಿಳಿದು ಬರುತ್ತದೆ ಹಾಗೂ ಅವರ 246 ವಚನಗಳು ಲಭ್ಯವಿದ್ದು, ಹಡಪದ ವೃತ್ತಿಯನ್ನು ಮಾಡಿಕೊಂಡು ಬಂದ ಇವರು ತಮ್ಮ ಕಾಯಕ, ಜೀವನ ಹಾಗೂ ಸೇವಾ ನಿಷ್ಠೆಗೆ ಹೆಸರಾಗಿದ್ದವರು. ಅಪ್ಪಣ್ಣನ ವಚನದಲ್ಲಿ ಅನುಭಾವ, ಸಾಮಾಜಿಕ ಚಿಂತನೆಯ ಹೊಳಪು, ಸಾಂಸ್ಥಿಕ ಮತ ಮತ್ತು ಪಂಥಗಳನ್ನು ನೇರವಾಗಿ ಖಂಡಿಸಿ, ಅದಕ್ಕೆ ಪರ್ಯಾಯವಾಗಿ ಜಂಗಮತೆ, ಸರಳತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಸಾಂಸ್ಥಿಕ ದೇವರುಗಳ ನಿರಾಕರಣೆ ಹಾಗೂ ಸರಳ ಭಾಷೆಯ ಬಳಕೆಯನ್ನು ಅಪ್ಪಣ್ಣನ ವಚನದಲ್ಲಿ ಮುಖ್ಯವಾಗಿ ಕಾಣಬಹುದು ಎಂದರು.

ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕರಾದ ಪ್ರೊ. ಕೃಷ್ಣ ಅವರು ವಚನಗಾಯನ ನಡೆಸಿಕೊಟ್ಟರು. ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಉಮೇಶ್ ಪೈ ವಂದಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ. ಹೆಚ್.ಕೆ. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!