ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್‌ನಿಂದ ಕೊಡಮಾಡುವ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಪ್ರತಿಭಾವಂತ ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ಕುಂಭಾಶಿ ಇದರ ವಿದ್ಯಾರ್ಥಿನಿ ಶ್ಲಾಘ ಸಾಲಿಗ್ರಾಮ, ಯು.ಬಿ,ಎಂ.ಸಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದ ವಿದ್ಯಾರ್ಥಿನಿ ಸಿಂಚನ ಕೋಟೇಶ್ವರ, ಮಾಧವ ಕೃಪಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಣಿಪಾಲದ ವಿದ್ಯಾರ್ಥಿನಿ ಲಾವಣ್ಯ ಟಿ, ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿ ವೈಭವ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣೂರು ವಿದ್ಯಾರ್ಥಿ ಶ್ರೀನಿಧಿ, ಲಿಟ್ಲರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿ ನಕ್ಷತ್ರ ಎನ್ ಕೋಟ, ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ಪ್ರಣ್ವಿತ್ ಪಿ, ಶ್ರೀ ಶಾಂಭವಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಗಿಳಿಯಾರು-ಕೋಟದ ವಿದ್ಯಾರ್ಥಿನಿ ಇಂಚರ ಭಟ್, ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿನಿ ಧನ್ಯ, ಶ್ರೀರಾಮ ಪ್ರಸಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಣೂರು ವಿದ್ಯಾರ್ಥಿನಿ ಕಾವ್ಯ, ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಾರ್ಕಡ ವಿದ್ಯಾರ್ಥಿ ನಿಧೀಶ್ ಭಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ವಿದ್ಯಾರ್ಥಿ ನಿತೇಶ್,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿ ವಿದ್ಯಾರ್ಥಿ ಪ್ರಥ್ವಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟತಟ್ಟು ವಿದ್ಯಾರ್ಥಿನಿ ಮೈತ್ರಿ, ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿನಿ ಸಾನ್ವಿಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟದ ವಿದ್ಯಾರ್ಥಿ ಶ್ರೀಜಿತ್ ಅವರನ್ನು ಆಯ್ಕೆ ಮಾಡಲಾಗಿದೆ.
ನವೆಂಬರ್ 14 ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ನಡೆಯುವ ಚಿಲುಮೆ- 2021(ಭರವಸೆಯ ತಂಗಾಳಿ) ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶೈಲಾ ಎಸ್ ಪೂಜಾರಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.