ಉಡುಪಿ: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಜನರು ಹೈನುಗಾರಿಕೆಯನ್ನು ಜೀವನಾಧಾರವಾಗಿ ಅವಲಂಬಿಸಿಕೊಂಡಿರುವುದರಿಂದ ಕಳೆದ ಹಲವಾರು ತಿಂಗಳಿನಿಂದ ಸರಕಾರ ಬಾಕಿ ಇರಿಸಿದ ಹಾಲಿನ ಸಹಾಯಧನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸರಕಾರವನ್ನು ಆಗ್ರಹಿಸಿದೆ.
ಈಗಿನ ಸರಕಾರವು ಪಶು ಆಹಾರದ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿದ್ದು ಹಾಲಿನ ದರವನ್ನು ಕಡಿಮೆ ಮಾಡುತ್ತಿದೆ, ಇದರಿಂದ ರೈತರಿಗೆ ಆದಾಯದಲ್ಲಿ ಬಹಳ ತೊಂದರೆಯಾಗುತ್ತಿದೆ. 800 ರೂಪಾಯಿಗೆ ಸಿಗುತ್ತಿದ್ದ ಪಶು ಆಹಾರ ಈಗ 1,100 ಆಗಿದೆ. ಆದರೆ ಹಾಲಿನ ದರ ಮಾತ್ರ ಯಥಾಸ್ಥಿತಿ ಇದೆ. ಅಲ್ಲದೇ ಅದಕ್ಕೆ ಕೊಡುವ ಸಹಾಯಧನ ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.
ಇದರಿಂದಾಗಿ ಹಾಲು ಉತ್ಪಾದಿಸುವ ರೈತರಿಗೆ ತುಂಬ ತೊಂದರೆಯಾಗುತ್ತಿದೆ. ಆದ್ದರಿಂದ ಪಶುಸಂಗೋಪನಾ ಇಲಾಖೆಯು ಕೂಡಲೇ ಈ ಬಗ್ಗೆ ಎಚ್ಚತ್ತುಕೊಂಡು ಹಾಲು ಉತ್ಪಾದಿಸುವ ರೈತರ ಸಹಾಯಧನವನ್ನು ಸಕಾಲ ದಲ್ಲಿ ಬಿಡುಗಡೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್ಲೂರು ಶಶಿಧರ ಶೆಟ್ಟಿಯವರು ಸರಕಾರವನ್ನು ಒತ್ತಾಯಿಸಿದ್ದಾರೆ.
Yes please…immediately action…