ಉಡುಪಿ: ಬ್ಯಾಂಕಿನ ಸಿಬ್ಬಂದಿಗಳ ಕಾರ್ಯಕ್ಷಮತೆಯ ಮೂಲಕ ಗ್ರಾಹಕ ಸ್ನೇಹಿ ಸೇವೆ ಬ್ಯಾಂಕಿನ ಪ್ರಗತಿಗೆ ಪೂರಕವಾಗಿದ್ದು, ಸ್ಪರ್ಧಾತ್ಮಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುನ್ನಡೆಯಲು ಸಿಬ್ಬಂದಿಗಳು ತರಬೇತಿ ಕಾರ್ಯಗಾರದ ಮೂಲಕ ಕಾರ್ಯಕ್ಷಮತೆ ವೃದ್ಧಿಸಲು ಮುಂದಾಗುವಂತೆ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಹೇಳಿದರು. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಇದರ ವತಿಯಿಂದ ಆಯೋಜಿಸಿದ ಸಿಬ್ಬಂದಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಬಿ.ಐ ಬ್ಯಾಂಕಿನ ನಿವೃತ್ತ ಡಿಜಿಎಂ ಪ್ರಕಾಶ್ ಆರ್.ಎಸ್, ಮಾರ್ಕೆಟಿಂಗ್ ಇನ್ ಬ್ಯಾಂಕಿಂಗ್, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನ ನಿವೃತ್ತ ಚೀಫ್ ಮ್ಯಾನೇಜರ್ ಶಿವಾನಂದ ಜಿ. ಕುಲಕರ್ಣಿ, ಡಿಜಿಟಲ್ ಬ್ಯಾಂಕಿಂಗ್ ಇನ್ ಇಂಡಿಯಾ ಹಾಗೂ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಮಾನವ ಸಂನ್ಮೂಲ ವಿಷಯದ ಬಗ್ಗೆ ತರಬೇತಿ ನೀಡಿದರು.
ಸಮಾರಂಭದಲ್ಲಿ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್ ಕೆ, ನಿರ್ದೇಶಕರಾದ ಶಿವರಾಮ ಕುಂದರ್, ಬ್ಯಾಂಕಿನ ಎಜಿಎಂ ಶಾರಿಕಾ ಕಿರಣ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.