ಉಡುಪಿ: ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದವರು ಕೋಟ್ಪಾ ಕಾಯಿದೆಯನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕಿನ ನಗರ ವ್ಯಾಪ್ತಿ ಪ್ರದೇಶಗಳ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 28 ಪ್ರಕರಣ ದಾಖಲಿಸಿ 2,100 ರೂ. ದಂಡ ವಸೂಲಿ ಮಾಡಿ, 12 ಅಂಗಡಿಗಳಿಗೆ ಫುಡ್ ಲೈಸನ್ಸ್ ಮಾಡುವಂತೆ ನೋಟೀಸು ನೀಡಿದರು.
ಈ ಸಂದರ್ಭದಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕೆ.ಎಸ್. ವೆಂಕಟೇಶ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಜಿಲ್ಲಾ ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕದ ಎನ್.ಟಿ.ಸಿ.ಪಿ ಸಮಾಜ ಕಾರ್ಯಕರ್ತೆ ಶೈಲಾ ಶ್ಯಾಮನೂರು, ಎ.ಎಸ್.ಐ ಶೀನ ಸಾಲಿಯಾನ್ ಉಪಸ್ಥಿತರಿದ್ದರು.