ಮಲ್ಪೆ: ಕೆಲವೇ ದಿನಗಳ ಹಿಂದೆ ಉದ್ಘಾಟನೆಗೊಂಡು ಜನಪ್ರಿಯತೆ ಗಳಿಸುತ್ತಿರುವ ರಾಜ್ಯದ ಪ್ರಪ್ರಥಮ ಸಮುದ್ರದಲ್ಲಿ ತೇಲುವ ಸೇತುವೆ ಕೊಚ್ಚಿಹೋಗಿದೆ ಎಂಬ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಚಂಡಮಾರುತದ ಹಿನ್ನಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡ ಕಾರಣ ಪ್ರವಾಸಿಗರಿಗೆ ತೇಲುವ ಸೇತುವೆಯಲ್ಲಿ ವಿಹರಿಸಲು ಅವಕಾಶ ಇಲ್ಲ.
ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಡಲು ಪ್ರಕ್ಷುಬ್ಧಗೊಂಡ ಕಾರಣ ತಾತ್ಕಾಲಿಕವಾಗಿ ಸೇತುವೆಯನ್ನು ಕಳಚುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೇತುವೆಯ ಸೆಂಟ್ರಲ್ ಲಾಕ್ ಕದಲಿಸಿದ್ದು, ಇಡೀ ಸೇತುವೆಯನ್ನು ಕಳಚಿಡಲಾಗುತ್ತಿದೆ ಎಂದು ಸುದೇಶ್ ಶೆಟ್ಟಿ ತಿಳಿಸಿದ್ದಾರೆ.