ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಹತ್ತಿರವಿರುವ ಬಹಳ ಕಾರಣೀಕ ಕ್ಷೇತ್ರವಾದ ಶ್ರೀ ಮಾಸ್ತಿ ಅಮ್ಮ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ಚಂಡಿಕಾಯಾಗ ಮಂಗಳವಾರ ಅಕ್ಷಯ ತೃತೀಯ ದಿನದಂದು ನಡೆಯಿತು.
ಪ್ರಾರ್ಥನೆ, ಪುಣ್ಯಾಹ ಕಲಾಸಾನಿಧ್ಯಯುಕ್ತವಾಗಿ ಚಂಡಿಕಾಯಾಗ ಆರಂಭವಾಯಿತು.
ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಚಂಡಿಕಾಯಾಗದ ಪೂರ್ಣಾಹುತಿ ನಡೆಯಿತು.
ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಗಾಂವ್ಸಕರ್ ಕುಟುಂಬಸ್ಥರು, ಸಾವಿರಾರು ಭಕ್ತಾದಿಗಳು ಭಾಗವಹಿಸಿದರು.