Tuesday, January 21, 2025
Tuesday, January 21, 2025

ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರದ ಉದ್ಘಾಟನೆ

ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರದ ಉದ್ಘಾಟನೆ

Date:

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಾಹೆ  ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರದ (ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್) ಉದ್ಘಾಟನಾ ಸಮಾರಂಭ ನಡೆಯಿತು.

ಇದು ಕ್ಯಾನ್ಸರ್ ಇರುವ ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಉಚಿತವಾಗಿ ವಸತಿ, ಪೌಷ್ಟಿಕ ಆಹಾರ, ಸಮಾಲೋಚನೆ ಮತ್ತು ಶೈಕ್ಷಣಿಕ ಸಹಾಯ ಸೇವೆಗಳನ್ನು ಒದಗಿಸುತ್ತದೆ. ಇದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ ಮಣಿಪಾಲ ಮತ್ತು ಆಕ್ಸೆಸ್‌ಲೈಫ್‌ನ ಜಂಟಿ ಯೋಜನೆಯಾಗಿದೆ.  

ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂ ಈ ಎಂ ಜಿ) ಮುಖ್ಯಸ್ಥರಾದ ಡಾ.ರಂಜನ್ ಆರ್ ಪೈ ಕೇಂದ್ರವನ್ನು ಉದ್ಘಾಟಿಸಿದರು. ಆಕ್ಸೆಸ್‌ಲೈಫ್ ಇದರ ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಗಿರೀಶ್ ನಾಯರ್, ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಅಂಕೀತ್ ದೇವ್, ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಗೌರವ ಅತಿಥಿಗಳಾಗಿದ್ದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರವು ಎನರ್ಜಿ ಸೆಲ್ ಎದುರು, ಬಿಕ್ಯೂ ರಸ್ತೆ ಬಳಿ, ಮಾಧವನಗರ, ಮಣಿಪಾಲ ಇಲ್ಲಿ ಕಾರ್ಯಾಚರಿಸಲಿದೆ. ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್, ಭಾರತದ ಲಾಭರಹಿತ (ಎನ್ ಜಿ ಓ) ನೋಂದಾಯಿತ ಸಂಸ್ಥೆಯಾಗಿದ್ದು, ತಮ್ಮ ಮಗುವಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕ್ಯಾನ್ಸರ್ ಕೇಂದ್ರಕ್ಕೆ ಬರುವ ಕುಟುಂಬಗಳಿಗೆ ಬಹುಸೌಲಭ್ಯ ಮತ್ತು ಬೆಂಬಲದ ಆರೈಕೆಯನ್ನು ಒದಗಿಸುತ್ತದೆ. 

3 ರಿಂದ 6 ತಿಂಗಳ ಅವಧಿಯವರೆಗೆ ಮತ್ತು ಕೆಲವೊಮ್ಮೆ ಒಂದು ವರ್ಷದ ಅವಧಿಯ ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ವಸತಿ, ನೈರ್ಮಲ್ಯದ ವಾತಾವರಣ, ಪೌಷ್ಟಿಕಾಂಶವುಳ್ಳ  ಊಟ,  ಸಮಾಲೋಚನೆ, ಮನರಂಜನಾ ಮತ್ತು ಶೈಕ್ಷಣಿಕ  ಸಹಾಯ ಸೌಲಭ್ಯವನ್ನು ಒದಗಿಸುತ್ತದೆ.

ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (MEMG) ಮುಖ್ಯಸ್ಥ  ಡಾ. ರಂಜನ್ ಆರ್ ಪೈ ಮಾತನಾಡಿ, ಮಣಿಪಾಲದ ಈ ಕೇಂದ್ರವು ಕರ್ನಾಟಕದ ಮೊದಲ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್ ಪರಿಕಲ್ಪನೆಯಾಗಿದೆ. ಇದು ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯು ನಡೆಯುತ್ತಿರುವಾಗ ಸಮಗ್ರ ಆರೈಕೆಯನ್ನು ಒದಗಿಸುತ್ತದೆ. ಈ ಪ್ರದೇಶದ ಬಹಳಷ್ಟು ಸ್ವಯಂಸೇವಕರಿಗೆ ಈ ಸೇವೆಯಲ್ಲಿ ತಾವು ತೊಡಗಿಸಿಕೊಳ್ಳಲು ಕೇಂದ್ರವು ದಾರಿಯನ್ನು ಒದಗಿಸಲಿದೆ ಎಂದರು.

ಆಕ್ಸೆಸ್‌ಲೈಫ್ ಇದರ ಸಹ -ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಅಂಕೀತ್ ದೇವ್ ಅವರು ಮಾತನಾಡಿ, ಮಾಹೆ ಸಹಯೋಗದೊಂದಿಗೆ ಮಣಿಪಾಲದಲ್ಲಿ ನಮ್ಮ ಹೊಸ ಕೇಂದ್ರವನ್ನು ಪ್ರಾರಂಭಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಕೇಂದ್ರದ ಮೂಲಕ ನಾವು ಎಲ್ಲಾ ಚಿಕಿತ್ಸೆ ನೀಡುವ ವೈದ್ಯರು, ಅರೆವೈದ್ಯಕೀಯ ತಂಡ ಮತ್ತು ಕುಟುಂಬಗಳನ್ನು ಬೆಂಬಲಿಸಲು ಸಾಧ್ಯವಾಗುವುದಲ್ಲದೆ, ಕರ್ನಾಟಕದಲ್ಲಿ  ಮಣಿಪಾಲದಲ್ಲಿ ನಮ್ಮ ವಿಸ್ತರಣೆಯು ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮಾತನಾಡಿ, ಈ ನಿಟ್ಟಿನಲ್ಲಿ ಕೆಲಸ ಮಾಡಿದ ತಂಡವನ್ನು ಅಭಿನಂದಿಸಿದರು ಮತ್ತು ಮಾಹೆ ಈ ಪ್ರತಿಷ್ಠಾನದೊಂದಿಗೆ ಮಣಿಪಾಲದಲ್ಲಿ ಈ ಕೇಂದ್ರದ ಆರಂಭಕ್ಕೆ ಬಹಳವಾಗಿ ಪ್ರಯತ್ನಿಸಿ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಏಕೆಂದರೆ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲೊಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಲ್ಲಿ  2/3 ಕ್ಕಿಂತ ಹೆಚ್ಚು ಮಕ್ಕಳು ಕರ್ನಾಟಕದ ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದಾರೆ.

ಕೇಂದ್ರಕ್ಕಾಗಿ ಮಾಹೆಯು ಆಸ್ಪತ್ರೆಯ ಸಮೀಪದಲ್ಲಿ ಎರಡು ವಸತಿ ಗೃಹಗಳನ್ನು  ಒದಗಿಸಿದೆ. ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಅದನ್ನು ನವೀಕರಿಸಿದೆ ಮತ್ತು ಯಾವುದೇ ಸಮಯದಲ್ಲಿ 12 ಕುಟುಂಬಗಳಿಗೆ ಆತಿಥ್ಯ ನೀಡಬಹುದಾದ ನೈರ್ಮಲ್ಯಯುಕ್ತ ವಸತಿಗೃಹವನ್ನಾಗಿ ಮಾರ್ಪಾಡು ಮಾಡಿದೆ ಎಂದರು.

ಮಾಹೆ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಬಾಲ್ಯದ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರವು ಈ ಸೌಲಭ್ಯಗಳನ್ನು ಒದಗಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದ ಆರೈಕೆ ಮಾಡುವವರು ಚಿಕಿತ್ಸೆಯನ್ನು ತ್ಯಜಿಸುವುದು ಮತ್ತು ನಿರಾಕರಿಸುವವರ ಮನ ಪರಿವರ್ತನೆ ಗುರಿಯನ್ನು ಹೊಂದಿದೆ.

ಇದರೊಂದಿಗೆ ಆಸ್ಪತ್ರೆಯು ಈ ಮಕ್ಕಳಿಗೆ ವಿವಿಧ ನಿಧಿಗಳು ಮತ್ತು ಯೋಜನೆಗಳ ಮೂಲಕ ಚಿಕಿತ್ಸೆಗೆ ಸಹಾಯ ಮಾಡುವುದನ್ನು ಮುಂದುವರೆಸಲಿದೆ.  ಈ ಎಲ್ಲಾ ಸೌಲಭ್ಯಗಳು ರೋಗಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಿಗಲಿದೆ  ಮತ್ತು ಕೇಂದ್ರದ ಕಾರ್ಯಾಚರಣೆಯ ವೆಚ್ಚದ ಹೆಚ್ಚು ಭಾಗ  ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಭರಿಸಲಿದೆ ಎಂದರು.
 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!