ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏಪ್ರಿಲ್ 2ರಿಂದ ಪ್ರಾರಂಭವಾದ ಗ್ರಾಮದ ಮನೆ ಮನೆ ಭಜನೆ ಗ್ರಾಮ ಭಜನೆ ಕಾರ್ಯಕ್ರಮ ನಾಳೆ ಏ. 23 ರ ಶನಿವಾರ ಸಾಯಂಕಾಲ 4.00 ಗಂಟೆಗೆ ಶ್ರೀಕೃಷ್ಣ ಮಠದಿಂದ ಶ್ರೀಕ್ಷೇತ್ರ ಕಡಿಯಾಳಿಯ ತನಕ ಧಿಂಡಿ ಭಜನೆ ಬೃಹತ್ ಮೆರವಣಿಗೆಯೊಂದಿಗೆ ನಡೆಯಲಿದೆ.
ಉಡುಪಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ.
ಈ ಮೆರವಣಿಗೆಯಲ್ಲಿ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮತ್ತು ಶಾಸಕರಾದ ಕೆ ರಘುಪತಿ ಭಟ್, ಉಡುಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ ವಿ ಶೆಣೈ, ಉಡುಪಿ ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಕ್ತೇಸರರಾದ ನಾಗೇಶ್ ಗಾಂವಸ್ಕರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗಡೆ, ಕಡಿಯಾಳಿ ದೇವಳದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಡಾ. ರವಿರಾಜ ಆಚಾರ್ಯ ಉಪಸ್ಥಿತರಿರಲಿದ್ದಾರೆ.
ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು, ಹಲವಾರು ಭಜನಾ ತಂಡಗಳು ಮತ್ತು ಭಜನೆಗೆ ನಾಂದಿ ಹಾಡಿದ ದಾಸರೇಣ್ಯರು, ಮತ್ತು ಪೌರಾಣಿಕ ಹಿನ್ನೆಲೆಯ ವೇಷಭೂಷಣಗಳು ಇರಲಿವೆ.
ಭಜನಾ ಕಾರ್ಯಕ್ರಮದ ನಂತರ ದೇವಳದಲ್ಲಿ ವಸಂತ ಫಲಾಹಾರದ ವ್ಯವಸ್ಥೆ ಮಾಡಲಾಗಿದೆ.
ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಾಲಯದ ಭಜನೆ ಆಗಮಿಸಿದ ಪ್ರತಿ ಮನೆಯ ಕನಿಷ್ಠ ಇಬ್ಬರಾದರೂ ಹಾಜರಿದ್ದು ಭಜನಾ ಮಂಗಲೋತ್ಸವ ಯಶಸ್ವಿಗೊಳಿಸಬೇಕಾಗಿ ಸಮಿತಿಯ ಪ್ರಕಟಣೆ ತಿಳಿಸಿದೆ.