ಉಡುಪಿ, ಫೆ.22: ಒಳಕಾಡು ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳಕಾಡು ಇಲ್ಲಿನ ನಲಂದ ಸಭಾಭವನದಲ್ಲಿ ನಡೆಯಿತು. ‘ಕಲಿಕಾ ಹಬ್ಬ’ ಎಂಬ ಕಿರೀಟವನ್ನು ಮಕ್ಕಳಿಗೆ ತೊಡಿಸಿ ‘ಒಗಟು ಹೊಂದಿರುವ ಕಾರ್ಡಿನ ಹಾರ’ವನ್ನು ಹಾಕಿ ನಾವಿನ್ಯಯುತವಾಗಿ ನಗರಸಭಾ ಉಪಾಧ್ಯಕ್ಷರಾದ ರಜನಿ ಹೆಬ್ಬಾರ್ ಉದ್ಘಾಟಿಸಿದರು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಡಾ. ವಿರೂಪಾಕ್ಷ ಅಧ್ಯಕ್ಷತೆ ವಹಿಸಿದ್ದು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಯಲ್ಲಮ್ಮ, ಕ್ಲಸ್ಟರ್ ಸಿಆರ್ ಪಿ ರಂಜಿತಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕುಸುಮ, ಪ್ರಾಥಮಿಕ ಶಿಕ್ಷಕ ಸಂಘದ ಕಾರ್ಯದರ್ಶಿ ವಿನಯ, ಎಲ್ಲಾ ಎಸ್ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಬೇರೆ ಶಾಲೆಗಳಿಂದ ಆಗಮಿಸಿದ ಸಂಪನ್ಮೂಲ ಶಿಕ್ಷಕರು, ಪೋಷಕರು, ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕರಾದ ಸುಮಾ, ಬಿ ಆರ್ ಪಿ ಜಯಶೀಲ ರೋಟೆ ಮುಂತಾದವರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿಯರಾದ ಮಾಲಿನಿ ಭಟ್ ಮತ್ತು ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಶಾಂತ ಹಾಗೂ ವಿನಯ ವಂದಿಸಿದರು.
ಒಳಕಾಡು: ಕಲಿಕಾ ಹಬ್ಬ

ಒಳಕಾಡು: ಕಲಿಕಾ ಹಬ್ಬ
Date: