ಮುಂಬಯಿ, ಫೆ.21: ಮುಂಬಯಿಯ ಹಿರಿಯ ವಕೀಲ ಅಡ್ವಕೇಟ್ ಡಿ. ಕೆ. ಶೆಟ್ಟಿ (ದಿನಕರ್) ಅವರನ್ನು ಭಾರತ ಸರಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ನೋಟರಿ ಕಾಯಿದೆ 1952ರಡಿಯಲ್ಲಿ ನೋಟರಿ ಪಬ್ಲಿಕ್ ಆಗಿ ನೇಮಕ ಮಾಡಿದೆ.
ಸಮಾಜ ಸೇವಕರೂ ಆಗಿರುವ ಡಿ. ಕೆ. ಶೆಟ್ಟಿಯವರು ಅನೇಕ ಬ್ಯಾಂಕ್‌ಗಳಿಗೆ ಪ್ಯಾನಲ್ ವಕೀಲರಾಗಿ ಮತ್ತು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಂಬೇ ಬಂಟ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ, ಬಂಟ್ಸ್ ಲಾ ಫಾರಂನ ಮಾಜಿ ಅಧ್ಯಕ್ಷರಾಗಿ, ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳ ಎಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಡ್ವಕೇಟ್ ಡಿ. ಕೆ. ಶೆಟ್ಟಿಯವರು ತಾನು ಪ್ರಾಥಮಿಕ ಶಿಕ್ಷಣ ಪಡೆದ ಕಾರ್ಕಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಹಾಗು ಹೈಸ್ಕೂಲು ಶಿಕ್ಷಣ ಪಡೆದ ಸರಕಾರಿ ಹೈಸ್ಕೂಲು ಬೆಳ್ಮಣ್ಣುವಿನ ಅಭಿವೃದ್ಧಿಗೆ ಗಣನೀಯ ಕೊಡುಗೆಯನ್ನು ನೀಡಿದ್ದಾರೆ.
ಅವರು ಅಂಧೇರಿ ಪಶ್ಚಿಮದ ನಿವಾಸಿ. ಮೂಲತಃ ಬೋಳ ಪರ್ತಿಮಾರುಗುತ್ತು (ಬಲ್ಯಾರುದಡ್ಡು)ವಿನ ಮುಂಬಯಿಯ ಹಿರಿಯ ಹೊಟೇಲು ಉದ್ಯಮಿ, ದಿವಂಗತ ಕಾಡ್ಯ ಎಮ್. ಶೆಟ್ಟಿ ಮತ್ತು ಸುರತ್ಕಲ್ ಮಧ್ಯ ಕುಂಜರಬಾಳಿಕೆ ದಿವಂಗತ ಭವಾನಿ ಕೆ. ಶೆಟ್ಟಿ ದಂಪತಿ ಪುತ್ರ.