ಉಡುಪಿ, ಫೆ.21: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಮತ್ತು ಶ್ರೀ ವ್ಯಾಸಪ್ರಜ್ಞಾ ಪ್ರತಿಷ್ಠಾನ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಿ. ಜಿ. ವಿಜಯಸಿಂಹ ಆಚಾರ್ಯರು ಕನ್ನಡಕ್ಕೆ ಅನುವಾದಿಸಿರುವ ಸಂಸ್ಕೃತದ ಅಪೂರ್ವ ನಾಟಕ, ಜಯಂತಭಟ್ಟನ ಆಗಮಡಂಬರ ಎಂಬ ಕೃತಿಯನ್ನು ಪರ್ಯಾಯ ಶ್ರೀಪಾದದ್ವಯರಾದ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಶ್ರೀ ಸುಶ್ರೀಂದ್ರ ತೀರ್ಥರು ಶ್ರೀ ಕೃಷ್ಣ ಮುಖ್ಯಪ್ರಾಣರಲ್ಲಿ ಸಮರ್ಪಣೆ ಮಾಡಿ ಬಿಡುಗಡೆಗೊಳಿಸಿದರು. ಸಿ. ಜಿ. ವಿಜಯಸಿಂಹ ಆಚಾರ್ಯರಿಂದ ಆಗಮಡಂಬರ ಮತ್ತು ಗೀತೆ ಎಂಬ ವಿಷಯದ ಕುರಿತು ಉಪನ್ಯಾಸ, ಮತ್ತು ಓಂಪ್ರಕಾಶ್ ಭಟ್ಟರಿಂದ ಆಗಮಡಂಬರ ಕೃತಿಯ ಔಚಿತ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.
ಆಗಮಡಂಬರ ಕೃತಿ ಲೋಕಾರ್ಪಣೆ

ಆಗಮಡಂಬರ ಕೃತಿ ಲೋಕಾರ್ಪಣೆ
Date: