Saturday, February 22, 2025
Saturday, February 22, 2025

ರಸ್ತೆ ಅಪಘಾತಗೊಂಡು, ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಇತರರಿಗೆ ಜೀವದ ಸಾರ್ಥಕತೆ

ರಸ್ತೆ ಅಪಘಾತಗೊಂಡು, ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಇತರರಿಗೆ ಜೀವದ ಸಾರ್ಥಕತೆ

Date:

ಮಣಿಪಾಲ, ಫೆ.20: ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ 35 ವರ್ಷದ ರಾಘವೇಂದ್ರ ಅವರಿಗೆ 17ನೇ ಫೆಬ್ರವರಿ 2025ರಂದು ಮಧ್ಯರಾತ್ರಿ 12.20 ಗೆ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರ ಗಾಯಗಳ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು, ಸಂಪೂರ್ಣ ವೈದ್ಯಕೀಯ ಚಿಕೆತ್ಸೆಯ ಹೊರತಾಗಿಯೂ ರಾಘವೇಂದ್ರ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಪ್ರಕಾರ ಪರಿಣಿತ ವೈದ್ಯರ ಸಮಿತಿಯು ಎರಡು ಬಾರಿ ಅಧಿಕೃತವಾಗಿ ಬ್ರೈನ್ ಡೆಡ್ ಎಂದು ಘೋಷಿಸಿತು. ಅವರ ಕುಟುಂಬವು ಅವರ ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡುವ ಧೈರ್ಯದ ನಿರ್ಧಾರವನ್ನು ತೆಗೆದುಕೊಂಡಿತು, ಆ ಮೂಲಕ ಅಗತ್ಯವಿರುವ ಇತರರಿಗೆ ಅಂಗ ದಾನ ಮಾಡಲು ನಿರ್ಧರಿಸಿತು.

ಜೀವಸಾರ್ಥಕಥೆ, ಸೊಟ್ಟೊ ಬೆಂಗಳೂರು ಇವರ ನಿಯಮಾವಳಿಗಳನ್ನು ಅನುಸರಿಸಿ, ರಾಘವೇಂದ್ರ ಅವರ ಒಂದು ಕಿಡ್ನಿ ಮತ್ತು ಯಕೃತ್ತನ್ನು ಎಜೆ ಆಸ್ಪತ್ರೆ, ಮಂಗಳೂರು, ಶ್ವಾಸಕೋಶವನ್ನು ಕಿಮ್ಸ್ ಆಸ್ಪತ್ರೆ , ಸಿಕಂದರಾಬಾದ್, ತೆಲಂಗಾಣ ಗೆ ಕಳುಹಿಸಲಾಯಿತು. ಒಂದು ಕಿಡ್ನಿ ಎರಡು ಕಾರ್ನಿಯಾಗಳನ್ನು ಮತ್ತು ಚರ್ಮವನ್ನು ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲು ಉಳಿಸಿಕೊಳ್ಳಲಾಯಿತು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು, ಅಂಗಾಂಗ ದಾನದ ಕಾರ್ಯವು ಜೀವ ಉಳಿಸುವ ಉದಾತ್ತ ಪ್ರಯತ್ನವಾಗಿದೆ ಎಂದು ಶ್ಲಾಘಿಸಿ, ಇತರರು ಇಂತಹ ಪರಹಿತಚಿಂತನೆಯನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ಸಹಾನುಭೂತಿಯ ನಿರ್ಧಾರಕ್ಕಾಗಿ ಅವರು ರಾಘವೇಂದ್ರ ಅವರ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಡ್ವಕೇಟ್‌ ಡಿ. ಕೆ. ಶೆಟ್ಟಿ ನೋಟರಿ ಪಬ್ಲಿಕ್‌ ಆಗಿ ನೇಮಕ

ಮುಂಬಯಿ, ಫೆ.21: ಮುಂಬಯಿಯ ಹಿರಿಯ ವಕೀಲ ಅಡ್ವಕೇಟ್‌ ಡಿ. ಕೆ. ಶೆಟ್ಟಿ...

ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ ಅಧಿಕಾರಿಗಳೊಂದಿಗೆ ಸಭೆ

ಉಡುಪಿ, ಫೆ.21: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಿಸುವ ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ...

ಆಗಮಡಂಬರ ಕೃತಿ ಲೋಕಾರ್ಪಣೆ

ಉಡುಪಿ, ಫೆ.21: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ...

ವಿಕಾಸಕ್ಕಾಗಿ ಜಾನಪದ

ಉಡುಪಿ, ಫೆ.21: ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ...
error: Content is protected !!