ಉಡುಪಿ, ಫೆ.17: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಲ್ಲಿ ವಿವಿಧ ಜಾತಿಯ ತೆಂಗು ಸಸಿಗಳೆಂದು ಹೊರ ರಾಜ್ಯದ ನರ್ಸರಿಗಳವರು ಅನಧಿಕೃತವಾಗಿ ಗ್ಯಾರಂಟಿ ಇಲ್ಲದೆ ಗಿಡಗಳನ್ನು ತಂದು ರೋಡು ಬದಿಗಳಲ್ಲಿ, ಎರಡು ವರ್ಷಗಳಲ್ಲಿ ಪಸಲು ಬರುವುದಾಗಿ ನಂಬಿಸಿ ಅತಿ ಹೆಚ್ಚು ದರದಲ್ಲಿ ಪ್ರತಿ ತೆಂಗಿನ ಸಸಿಗಳಿಗೆ 1500 ರೂ. ವರೆಗೂ ಮಾರಾಟ ಮಾಡಿ ರೈತರಿಗೆ ಮೋಸ ಮಾಡುತ್ತಿರುವುದು ತೋಟಗಾರಿಕೆ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯಲ್ಲಿರುವ ಅಧಿಕೃತ ನರ್ಸರಿಗಳು, ತೋಟಗಾರಿಕಾ ಇಲಾಖೆ ನರ್ಸರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಧಿಕೃತವಾಗಿ ಉತ್ಪಾದನೆ ಮಾಡಿದಂತ ಕಸಿ/ ಸಸಿಗಳನ್ನು ಖರೀದಿಸುವಂತೆ ಹಾಗೂ ಸಂಬಂಧಪಟ್ಟವರಿಂದ ಬಿಲ್ಲನ್ನು ಶೀಘ್ರವಾಗಿ ಪಡೆದುಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
ಅನಧಿಕೃತ ಗಿಡ; ತೆಂಗು ಬೆಳೆಗಾರರಿಗೆ ಎಚ್ಚರಿಕೆ

ಅನಧಿಕೃತ ಗಿಡ; ತೆಂಗು ಬೆಳೆಗಾರರಿಗೆ ಎಚ್ಚರಿಕೆ
Date: