ಉಡುಪಿ, ಫೆ.14: ಭಾರತದ ಮಹಾ ಯೋಜನಾಧಿಕಾರಿಗಳು ಜನನ-ಮರಣ ನೋಂದಣಿ ಅಧಿನಿಯಮ 1969 ರ ತಿದ್ದುಪಡಿ ಅಧಿನಿಯಮ 2023 ನ್ನು ಅನುಷ್ಠಾನಗೊಳಿಸಿದ್ದು, ಅದರನ್ವಯ ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999 ಕ್ಕೆ ತಿದ್ದುಪಡಿಯನ್ನು 2024 ರ ಡಿಸೆಂಬರ್ 31 ರಂದು ಅಧಿಸೂಚಿಸಲಾಗಿದ್ದು, ಸದರಿ ಅಧಿಸೂಚನೆಯು 2025 ರ ಜನವರಿ 16 ರಂದು ಪ್ರಕಟಗೊಂಡಿರುತ್ತದೆ. ಅದರಂತೆ ಜನನ-ಮರಣ ಪ್ರಮಾಣ ಪತ್ರ ಪಡೆಯಲು ಪ್ರತಿಯೊಂದು ಜನನ ಮರಣ ಪ್ರಮಾಣ ಪತ್ರಕ್ಕೆ 50 ರೂ., ಜನನ ಮರಣ ತಡ ನೋಂದಣಿ –ದಂಡನಾ ಶುಲ್ಕ 20 ರೂ. (22 ದಿನದಿಂದ 30 ದಿನದವರೆಗೆ, ಆಸ್ಪತ್ರೆಯಲ್ಲಿ ಸಂಭವಿಸಿದ ಜನನ ಮರಣ ಹೊರತುಪಡಿಸಿ), ಜನನ ಮರಣ ತಿದ್ದುಪಡಿ ಶುಲ್ಕ 50 ರೂ. (31 ದಿನದಿಂದ 1 ವರ್ಷದವರೆಗೆ ದಂಡನಾ ಶುಲ್ಕ) ಹಾಗೂ ಜನನ ಮರಣ ತಡ ನೋಂದಣಿ 10 ರೂ. (1 ವರ್ಷದ ನಂತರ-ನ್ಯಾಯಾಲಯದ ಆದೇಶದಂತೆ ಪ್ರಸ್ತುತ) ಪಾವತಿಸಿ, ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಜನನ-ಮರಣ ಪ್ರಮಾಣ ಪತ್ರ: ಪರಿಷ್ಕೃತ ಶುಲ್ಕ ಜಾರಿ

ಜನನ-ಮರಣ ಪ್ರಮಾಣ ಪತ್ರ: ಪರಿಷ್ಕೃತ ಶುಲ್ಕ ಜಾರಿ
Date: