ಇನ್ನಂಜೆ, ಫೆ.11: ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದಡಿ ಇನ್ನಂಜೆ ಯುವಕ ಮಂಡಲದಲ್ಲಿ ಉಚಿತ ಬಾಯಿ ಮತ್ತು ದಂತ ತಪಾಸಣಾ ಶಿಬಿರ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಉಪಾಧ್ಯಕ್ಷರಾದ ಸುರೇಖಾ, ಕಾಪು ತಾಲೂಕು ವೈದ್ಯಾಧಿಕಾರಿಗಳಾದ ವಾಸುದೇವ್ ಉಪಾಧ್ಯಾಯ, ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು, ಜೆ.ಸಿ.ಐ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.