Monday, February 24, 2025
Monday, February 24, 2025

ಉಡುಪಿ ಜಿಲ್ಲಾ ಮೂಲಗೇಣಿದಾರರ ಸಮಾವೇಶ

ಉಡುಪಿ ಜಿಲ್ಲಾ ಮೂಲಗೇಣಿದಾರರ ಸಮಾವೇಶ

Date:

ಉಡುಪಿ, ಫೆ.10: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಗೇಣಿ ಒಕ್ಕಲುಗಳ ಸಮಸ್ಯೆ ಅತ್ಯಂತ ಐತಿಹಾಸಿಕವಾಗಿದ್ದು ಸ್ವಾತಂತ್ರ್ಯ ದೊರಕಿ ಏಳುವರೆ ದಶಕಗಳ ಅನಂತರವೂ ಜೀವಂತವಾಗಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ಈ ರೀತಿಯ ಶೇೂಷಣೆ ನಿವಾರಿಸುವರೆ ರಾಜ್ಯ ಸರ್ಕಾರ 2011ರಲ್ಲಿ ಮೂಲಗೇಣಿದಾರರಿಗೆ ಭೂಮಿಯ ಸಂಪೂರ್ಣ ಒಡೆತನ ಖಾತ್ರಿಪಡಿಸುವ ಕಾಯಿದೆ ನಿರ್ಣಯಿಸಿ ರಾಷ್ಟ್ರಪತಿಗಳ ಅಂಕಿತವನ್ನು ಪಡೆದು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಹಿತಾಸಕ್ತಿ ಮೂಲಿದಾರರು ಹೈಕೋರ್ಟ್ ಮೆಟ್ಟಿಲು ಹತ್ತಿದರು. ಇದರ ಪರಿಣಾಮವಾಗಿ ರಾಜ್ಯ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠ ಮೂಲಗೇಣಿದಾರರ ಬೇಡಿಕೆ ನ್ಯಾಯಯುತವಾಗಿದೆ ಎಂದು ತೀರ್ಪು ನೀಡಿತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕಾರಣ ಇದೀಗ ತೀರ್ಪು ಬರುವ ಹಂತದಲ್ಲಿದ್ದು ಈ ನ್ಯಾಯ ಪಡೆಯುವಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಮೂಲಗೇಣಿದಾರರು ಒಟ್ಟಾಗಿ ಧ್ವನಿ ಎತ್ತಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಂವಿಧಾನ ವಿಶ್ಲೇಷಕ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅವರು ಮೂಲಗೇಣಿದಾರರ ಸಮಾವೇಶವನ್ನು ಉದ್ದೇಶಿಸಿ ವಿಶೇಷ ಮಾಹಿತಿ ಉಪನ್ಯಾಸ ನೀಡಿದರು. ಉಡುಪಿ ಜಿಲ್ಲಾ ಬಳಕೆದಾರರ ವೇದಿಕೆಯ ಹೊರಗಿನ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿತು.

ಮಂಗಳೂರು ಮೂಲಗೇಣಿ ಒಕ್ಕಲು ವೇದಿಕೆಯ ಅಧ್ಯಕ್ಷರಾದ ಎಂ.ಕೆ.ಯಶೇೂಧರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಮೂಲಗೇಣಿ ಹೇೂರಾಟದ ಪ್ರತಿಯೊಂದು ಅನುಭವಗಳನ್ನು ಸಭೆಯ ಮುಂದೆ ಎಳೆ ಎಳೆಯಾಗಿ ಹಂಚಿಕೊಂಡರು. ವೇದಿಕೆಯಲ್ಲಿ ಹಿರಿಯ ಪದಾಧಿಕಾರಿಗಳಾದ ಕ್ಯಾಪ್ಟನ್ ಹ್ಯುಗಸ್ ಮಂಗಳೂರು, ಕೇೂಶಾಧಿಕಾರಿ ಶಂಕರ್ ಪ್ರಭು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಂಘಟನಾ ಪ್ರತಿನಿಧಿ ಎಸ್.ಎಸ್.ಶೇಟ್ ವಂದನಾರ್ಪಣೆಗೈದರು. ಉಡುಪಿ ಜಿಲ್ಲಾ ಏಳು ತಾಲೂಕಿನ ಮೂಲಗೇಣಿದಾರರು ಸಮಾರಂಭದಲ್ಲಿ ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!