ಮಣಿಪಾಲ, ಫೆ.9: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಹಿನ್ನೆಲೆಯಲ್ಲಿ ಮಣಿಪಾಲ ವಾರ್ಡ್ ಬಿಜೆಪಿ ಕಾರ್ಯಕರ್ತರ ವತಿಯಿಂದ ಮಣಿಪಾಲ ಹುಡ್ಕೋ ಕಾಲನಿಯ ಜಂಕ್ಷನ್ ಬಳಿ ಪಟಾಕಿ ಸಿಡಿಸಿ, ಸಿಹಿತಿಂಡಿ ಹಾಗೂ ತಂಪು ಪಾನೀಯ ವಿತರಿಸಿ ವಿಜಯೋತ್ಸವ ಸಂಭ್ರಮಾಚರಣೆ ನಡೆಸಲಾಯಿತು.
ಮಣಿಪಾಲ ವಾರ್ಡ್ ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ಮಾಜಿ ನಗರಸಭಾ ಸದಸ್ಯರಾದ ನರಸಿಂಹ ನಾಯಕ್, ಪಕ್ಷದ ಹಿರಿಯರಾದ ದಯಾನಂದ ನಾಯಕ್, ಸುಂದರ ಶೆಟ್ಟಿ, ಮಣಿಪಾಲ ವಾರ್ಡ್ ಬೂತ್ ಅಧ್ಯಕ್ಷರಾದ ಸಂತೋಷ್ ಪೈ, ವಿನಯಾ ಕಾಮತ್, ಹೆರ್ಗ ಮಹಾಶಕ್ತಿಕೇಂದ್ರ ಸಹ ಸಂಚಾಲಕರಾದ ಶಿವಾನಂದ ಕಾಮತ್, ನಗರ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಸುಧಾ ಪೈ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರಥ್ವಿರಾಜ್ ಮಣಿಪಾಲ, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಮಣಿಪಾಲ, ಹಾಗೂ ಪಕ್ಷದ ಹಿತೇಷಿಗಳಾದ ಸಚಿನ್ ಕಾಮತ್, ಹರೀಶ್ ಹೆಬ್ರಿ, ನವೀನ್ ಶೆಟ್ಟಿ, ಮಧುಸೂದನ್ ರಾವ್, ಈಶ್ವರ್ ಸಾಲ್ಯಾನ್, ಅಧೀಶ್ ಶೆಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.