Wednesday, February 5, 2025
Wednesday, February 5, 2025

ಮಣಿಪಾಲ: ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿ ಅನಾವರಣ

ಮಣಿಪಾಲ: ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿ ಅನಾವರಣ

Date:

ಮಣಿಪಾಲ, ಫೆ.4: ವಿಶ್ವ ಕ್ಯಾನ್ಸರ್ ದಿನ-2025 ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿ ಅನಾವರಣ ಮತ್ತು ಮಾಹಿತಿ ಕಾರ್ಯಕ್ರಮ ವಿಶ್ವ ಕ್ಯಾನ್ಸರ್ ದಿನ-2025 ರ ಅಂಗವಾಗಿ ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿ , ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲದ ಸಹಯೋಗದೊಂದಿಗೆ ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿಯನ್ನು ಕೆ.ಎಮ್. ಸಿ. ಯ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ್ ಶೆಟ್ಟಿಯವರು ಜಂಟಿಯಾಗಿ ಕೆ.ಎಮ್.ಸಿ. ಯ ಇಂಟರ್ಯಾಕ್ಟ್ ಆವರಣದಲ್ಲಿ ಅನಾವರಣಗೊಳಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿಕುಮಾರ್ ಉಪಸ್ಥಿತರಿದ್ದರು.

ಸಮುದಾಯ ವೈದ್ಯಕೀಯ ವಿಭಾಗದ ಆಡಿಷನಲ್ ಪ್ರೋಫೆಸರ್ ಮತ್ತು ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿಯ ಕೋ-ಆರ್ಡಿನೇಟರ್ ಡಾ.ರಂಜಿತಾ ಎಸ್. ಶೆಟ್ಟಿಯವರು ವಿಶ್ವ ಕ್ಯಾನ್ಸರ್ ದಿನ-2025 ರ ಥೀಮ್ “ಯುನೈಟೆಡ್ ಫಾರ್ ಯುನಿಕ್” ನ ಬಗ್ಗೆ ವಿವರಿಸಿ, ಸಂಸ್ಥೆಯು ಯಾವ ರೀತಿ ಕ್ಯಾನ್ಸರ್ ಪತ್ತೆ ಹಚ್ಚಲು ಮತ್ತು ನಿವಾರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂಬುದನ್ನು ವಿವರಿಸಿದರು. ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿಯನ್ನು ಶ್ರೀನಾಥ್ ಮಣಿಪಾಲ್ ಮತ್ತು ರವಿ ಹೀರೆಬೆಟ್ಟು ರಚಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ: ಪುತ್ತಿಗೆ ಶ್ರೀ

ಉಡುಪಿ, ಫೆ.4: ಯೋಗದಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಸಾಧ್ಯ ಎಂದು...

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ದ ಗುಡುಗಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಫೆ.4: ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ...

ಕಾಪು: ಆರೋಗ್ಯ ಇಲಾಖೆಗೆ ಜಾಗವನ್ನು ದಾನ ಮಾಡಿದ ಗಣೇಶ್ ಬೋಜ ಕರ್ಕೇರ

ಕಾಪು, ಫೆ.4: ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು ವ್ಯಾಪ್ತಿಯ 92 ಹೇರೂರು...

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಗೆ ಸದಸ್ಯರಾಗಲು ಅರ್ಜಿ ಆಹ್ವಾನ

ಉಡುಪಿ, ಫೆ.4: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಖರಣ ಇಲಾಖೆಯ ವತಿಯಿಂದ...
error: Content is protected !!