ಉಡುಪಿ, ಫೆ.3: ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿನ ಇಂಟರಾಕ್ಟ್ ಸಂಘ ಮತ್ತು ರೋಟರಿ ಕ್ಲಬ್ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಪರಿಣಾಮಕಾರಿ ನಾಯಕತ್ವ ಕಾರ್ಯಾಗಾರವು ಶಾಲೆಯ ನಲಂದಾ ಸಭಾಭವನದಲ್ಲಿ ನಡೆಯಿತು. ರೋಟರಿ ಉಡುಪಿಯ ಅಧ್ಯಕ್ಷರಾದ ಗುರುರಾಜ್ ಭಟ್, ಇಂಟರಾಕ್ಟ್ ಸಭಾಪತಿ ಸಾಧನಾ ಸತೀಶ್, ಸಂಪನ್ಮೂಲ ವ್ಯಕ್ತಿ ಹೇಮಂತ್ ಕಾಂತ್, ಗೋಪಾಲಕೃಷ್ಣ ಪ್ರಭು, ಅನಂತರಾಮ ಉಪಾಧ್ಯಾಯ, ಮುಖ್ಯ ಶಿಕ್ಷಕಿ ಪೂರ್ಣಿಮಾ, ಇಂಟರಾಕ್ಟ್ ಮಾರ್ಗದರ್ಶಿ ಶಿಕ್ಷಕಿ ಲಲಿತಾ, ಇಂಟರಾಕ್ಟ್ ಸಂಘದ ಉಪಾಧ್ಯಕ್ಷ ಸುಧಾಂಶು, ರೋಟರಾಕ್ಟರ್ ಅಪೂರ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಹೇಮಂತ್ ಕಾಂತ್ ಅವರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ನಾಯಕತ್ವದ ಕುರಿತು ತರಬೇತಿಯನ್ನು ವಿವಿಧ ಚಟುವಟಿಕೆಗಳ ಮೂಲಕ ನೀಡಿದರು. ವಿಭಾ ನಾಯಕ್ ಸ್ವಾಗತಿಸಿ, ಮಾನ್ಯತಾ ವಂದಿಸಿದರು. ನಿಸರ್ಗ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಶ್ರೀಸ್ಕಂಧ ಮತ್ತು ಸ್ವಪ್ನಾ ಅನಿಸಿಕೆ ವ್ಯಕ್ತಪಡಿಸಿದರು. ಭೂಮಿಕಾ ಮತ್ತು ಪ್ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.