ಕೋಟ, ಫೆ.3: ಸ್ವರಾಜ್ಯ ೭೫, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ ಹಾಗೂ ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಹಾಗೂ ಹಸ್ತ ಚಿತ್ತ ಫೌಂಡೇಷನ್ (ರಿ.)ವಕ್ವಾಡಿ ಇವರ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸಮ್ಮಿಲನ ಹಾಗೂ ವಿದ್ಯಾರ್ಥಿ ವೇತನ ಸಮಾರಂಭ ಸನ್ಮತಿ ದೀಪದ ಅನುರಣೆ ಕಾರ್ಯಕ್ರಮ ಕೋಟ ಕಾರಂತರ ಥೀಮ್ ಪಾರ್ಕ್ನಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಕೆ. ಸತೀಶ ಕುಂದರ್ ಬಾರಿಕೆರೆ ವಹಿಸಿದ್ದರು. ದೀಪ ಬೆಳಗಿಸಿ ಉದ್ಘಾಟಿಸಿದ ಹಾಜಿ ಅಬ್ದುಲ್ಲಾ ಸಾಹೇಬ್ ಟ್ರಸ್ಟ್ನ ಉಪಾಧ್ಯಕ್ಷ ಸಿರಾಜ್ ಅಹಮ್ಮದ್ದ ಸಾಹೇಬ್ ಅಶಕ್ತರಿಗೆ ಸಹಕಾರಿಯಾಗುವುದು ನಮ್ಮ ಕರ್ತವ್ಯ ಹಾಜಿ ಅಬ್ದುಲ್ಲಾ ಸಾಹೇಬ್ ಸಹಾ ಸಹಕಾರದ ಮನೋಭಾವದ ವ್ಯಕ್ತಿಯಾಗಿದ್ದರು. ಅವರಂತೆ ನಾವು ಕೂಡಾ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು ಎಂದರು.
ಮುಖ್ಯ ಅತಿಥಿ ಬಂಟಕಲ್ಲು ರಾಮಕೃಷ್ಣ ಶರ್ಮಾ, ಅಕ್ಷತಾ ಗಿರೀಶ್ ಐತಾಳ್ ಉಪಸ್ಥಿತರಿದ್ದರು. ವಿಶೇಷವಾದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರಾವಳಿಗರ ಕೊಡುಗೆಯ ವಿಚಾರವನ್ನು ಕವಿತಾ ಆಚಾರ್ಯ ಮುದೂರು ಹಂಚಿಕೊಂಡರು. ಕಾರಂತ ಥೀಮ್ ಪಾರ್ಕ್ನ ಟ್ರಸ್ಟ್ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಮಾರ್ಗದರ್ಶನ ನೀಡಿದರು. ಅಕ್ಷತಾ ಗಿರೀಶ್ ಐತಾಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಸಂಚಾಲಕರಾದ ಪ್ರದೀಪ್ ಕುಮಾರ್ ಬಸ್ರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮಿತಾ ಪ್ರಾರ್ಥಿಸಿದರು.