Tuesday, February 4, 2025
Tuesday, February 4, 2025

ಮಧ್ವನವರಾತ್ರೋತ್ಸವ ಸಂಭ್ರಮ

ಮಧ್ವನವರಾತ್ರೋತ್ಸವ ಸಂಭ್ರಮ

Date:

ಉಡುಪಿ, ಫೆ.3: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸಂಜೆ ರಾಜಾಂಗಣದಲ್ಲಿ ನಡೆದ ಮಧ್ವ ನವರಾತ್ರೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮುಖ್ಯಸ್ಥರನ್ನು ಸನ್ಮಾನಿಸಿದರು. ಶ್ರೀಮಧ್ವಾಚಾರ್ಯರು ಅವತರಿಸಿದಾಗ ಅವರಿಗೆ ಹಾಲಿನ ವ್ಯವಸ್ಥೆಗಾಗಿ ಗೋದಾನ ಮಾಡಿದ ಮೂಡಿಲ್ಲಾಯರೆಂದೇ ಪ್ರಸಿದ್ಧವಾದ ಚಿತ್ಪಾಡಿಯ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವಸ್ಥಾನದ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಬಲ್ಲಾಳರು ಹಾಗೂ ಕಾಸರಗೋಡಿನಲ್ಲಿ ಇರುವ ಶ್ರೀ ಜಯಸಿಂಹ ರಾಜನ ಪರಂಪರೆಯ ಮಾಣಿಪ್ಪಾಡಿ ಅರಮನೆಯ ಅರ್ಚಕರಾದ ವೆಂಕಟೇಶ ಮನೋಲಿತ್ತಾಯ ಹಾಗೂ ಶ್ರೀ ಮಧ್ವಾಚಾರ್ಯರು ಕೃಷ್ಣಾಮೃತಮಹಾರ್ಣವ ಗ್ರಂಥವನ್ನು ರಚಿಸಿದ ಶ್ರೀಕ್ಷೇತ್ರ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ. ರಮಾನಂದ ಭಟ್ ಇವರನ್ನು ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪರಮಾನುಗ್ರಹ ರೂಪವಾದ ಪ್ರಸಾದವನ್ನು ನೀಡಿ ಸನ್ಮಾನಿಸಿದರು. ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ಹಿರಿಯ ವಿದ್ವಾಂಸರಾದ ಪ್ರೊ ವ್ಯಾಸನಕೆರೆ ಪ್ರಭಂಜನಾಚಾರ್ಯ, ದಿವಾನರಾದ ವಿದ್ವಾನ್ ಎಂ ಪ್ರಸನ್ನ ಆಚಾರ್ಯ, ಮಹಿತೋಷ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಡಾ. ಬಿ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರಿಣಾಮಕಾರಿ ನಾಯಕತ್ವ ಕಾರ್ಯಾಗಾರ

ಉಡುಪಿ, ಫೆ.3: ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿನ ಇಂಟರಾಕ್ಟ್ ಸಂಘ...

ಕ.ಸಾ.ಪ ಉಡುಪಿ ತಾಲೂಕು ಘಟಕದ ‘ಉಡುಪಿ ಚಾವಡಿ’ ಅಭಿಯಾನ ಪ್ರಾರಂಭ

ಉಡುಪಿ, ಫೆ.3: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ...

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರ ಸಮ್ಮಿಲನ

ಕೋಟ, ಫೆ.3: ಸ್ವರಾಜ್ಯ ೭೫, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ...

ಜ್ಞಾನಭಾರತ್ ಬಾಲಸಂಸ್ಕಾರ ವಿದ್ಯಾರ್ಥಿಗಳಿಂದ ಹಿರಿಯಡ್ಕ ದೇಗುಲ ದರ್ಶನ

ಹಿರಿಯಡ್ಕ, ಫೆ.3: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್...
error: Content is protected !!