ಉಡುಪಿ, ಫೆ.1: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಖಾಯಂ ಜಾಹೀರಾತು ಫಲಕಗಳಲ್ಲಿ ನಗರಸಭೆಯಿಂದ ನೀಡಲಾಗುವ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ಕಡ್ಡಾಯವಾಗಿ ದಾಖಲಿಸಬೇಕಾಗಿರುತ್ತದೆ. ಆದರೆ ಹಲವಾರು ಖಾಯಂ ಜಾಹೀರಾತುದಾರರು ತಮ್ಮ ಜಾಹೀರಾತು ಫಲಕಗಳಲ್ಲಿ ಅನುಮತಿ ಸಂಖ್ಯೆಯನ್ನು ನಮೂದಿಸದೇ ಇರುವುದು ಹಾಗೂ ಅವಧಿ ಮುಗಿದಿರುವ ಬ್ಯಾನರ್/ಕಟೌಟ್‌ಗಳನ್ನು ತೆರವುಗೊಳಿಸದೇ ಇರುವುದು ಕಂಡು ಬಂದಿರುತ್ತದೆ. ತಮ್ಮ ಖಾಯಂ ಜಾಹೀರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸದೇ ಇರುವವರು ಫೆಬ್ರವರಿ 7 ರ ಒಳಗಾಗಿ ದಾಖಲಿಸಬೇಕು. ದಾಖಲಿಸದೇ ಇರುವ ಜಾಹೀರಾತು ಫಲಕಗಳನ್ನು ಹಾಗೂ ಅವಧಿ ಮುಗಿದಿರುವ ಬ್ಯಾನರ್/ಕಟೌಟ್‌ಗಳನ್ನು ಅನಧಿಕೃತವೆಂದು ಭಾವಿಸಿ ನಗರಸಭೆಯಿಂದ ತೆರವುಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ: ಅವಧಿ ಮುಗಿದಿರುವ ಬ್ಯಾನರ್ /ಕಟೌಟ್‌ಗಳ ತೆರವಿಗೆ ಸೂಚನೆ
ಉಡುಪಿ: ಅವಧಿ ಮುಗಿದಿರುವ ಬ್ಯಾನರ್ /ಕಟೌಟ್‌ಗಳ ತೆರವಿಗೆ ಸೂಚನೆ
Date: