ಉಡುಪಿ, ಫೆ.1: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ 31ವರ್ಷ ಸೇವೆ ಸಲ್ಲಿಸಿ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಆಗಿ ನಿವೃತ್ತಿ ಹೊಂದಿದ್ದ ಮಹಾಬಲ ಇವರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಇವರು ಬೀಳ್ಕೊಡುಗೆ ಸಮಾರಂಭ ನೆಡೆಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಇವರು 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಶಂಕರನಾರಾಯಣ, ಉಡುಪಿ, ಅಮಾಸೆಬೈಲು, ಬೈಂದೂರು ಹಾಗೂ ಕೊಲ್ಲೂರು ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ನಿವೃತ್ತ ಮಹಾಬಲ ಇವರ ಪತ್ನಿ ಶೈಲಜಾ, ಪುತ್ರ ಅವಿನಾಶ್, ಅಜಿತ್, ಅಶ್ವಿನಿ, ಸೊಸೆ ಸವಿತಾ, ಮೊಮ್ಮಗಳಾ ದ್ವಿತಿ ಹಾಜರಿದ್ದರು.
ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ಗೆ ಬೀಳ್ಕೊಡುಗೆ ಸಮಾರಂಭ
ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ಗೆ ಬೀಳ್ಕೊಡುಗೆ ಸಮಾರಂಭ
Date: