Friday, January 31, 2025
Friday, January 31, 2025

ಶ್ರೀ ಕೃಷ್ಣ ಮಠಕ್ಕೆ ಮಂತ್ರಾಲಯ ಮಠಾಧೀಶರ ಭೇಟಿ

ಶ್ರೀ ಕೃಷ್ಣ ಮಠಕ್ಕೆ ಮಂತ್ರಾಲಯ ಮಠಾಧೀಶರ ಭೇಟಿ

Date:

ಉಡುಪಿ, ಜ.31: ಪರ್ಯಾಯ ಮಠಾದೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ತಮ್ಮ ಪರ್ಯಾಯ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರ ಶ್ರೀಪಾದರನ್ನು ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತದೊಂದಿಗೆ ಪುತ್ತಿಗೆ ಯತಿದ್ವಯರು ಆದರದಿಂದ ಬರಮಾಡಿಕೊಂಡರು.

ಬಳಿಕ ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಸತ್ಕರಿಸಿದ ಪರ್ಯಾಯ ಶ್ರೀಪಾದರು ತಮ್ಮ ಮಠಕ್ಕೂ ಮಂತ್ರಾಲಯ ಮಠಕ್ಕೂ ಇರುವ ಅವಿನಾಭಾವ ಮಧುರ ಸಂಬಂಧಗಳನ್ನು ಸ್ಮರಿಸಿ ಮುಂದೆಯೂ ಇದು ಶಾಶ್ವತವಾಗಿ ಮುಂದುವರೆಯಲಿ ಎಂದು ಹಾರೈಸಿದರು. ನಮ್ಮ ಮಂತ್ರಾಲಯ ರಾಘವೇಂದ್ರ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಮತ್ತು ಉಡುಪಿ ಪುತ್ತಿಗೆ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಹೆಸರು ಒಂದೇ ಆಗಿದೆ ಎಂದು ಉಲ್ಲೇಖಿಸಿದ ಸುಬುದೇಂದ್ರ ತೀರ್ಥ ಶ್ರೀಪಾದರು, ಸುಗುಣೇಂದ್ರ ತೀರ್ಥರು ಕೂಡಾ ನಮ್ಮ ಪೂರ್ವಿಕ ಯತಿಗಳಲ್ಲೊಬ್ಬರು ಎಂದು ಸ್ಮರಿಸಿ ಈ ಪುತ್ತಿಗೆ ಮಠದ ಶ್ರೀಗಳು ನನಗೆ ಅಣ್ಣನ ಸಮಾನ. ಇವರ ಚತುರ್ಥ ಪರ್ಯಾಯಕ್ಕೆ ತಮ್ಮ ನ ಶಾರ್ಟ್ ವಿಸಿಟ್ ಇದು. ಮತ್ತೆ ಸಂಸ್ಥಾನ ಸಮೇತ ಆಗಮಿಸುತ್ತೇವೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಯವರೂ ಉಪಸ್ಥಿತರಿದ್ದು ದೇವರ ದರ್ಶನ ಪಡೆದರು. ಪರ್ಯಾಯ ಶ್ರೀಪಾದರು ತಮ್ಮೆಲ್ಲರ ಹೆಸರಿನಲ್ಲಿಯೂ ಇಂದ್ರ ಪದ ಸೇರಿದ್ದು, ಉಡುಪಿ, ಧರ್ಮಸ್ಥಳ, ಮಂತ್ರಾಲಯಗಳ ಪ್ರತಿನಿಧಿಗಳು ಒಂದೆಡೆ ಇಂದು ಸೇರಿದ್ದು ತ್ರಿವೇಣಿ ಸಂಗಮ ಸದೃಶವಾಗಿ ಒಂದರ್ಥದಲ್ಲಿ ಮಹಾಕುಂಭ ನೆನೆಪಿಸುವಂತಿದೆ ಎಂದು ಪ್ರಶಂಸಿಸಿದರು. ಹೆಗ್ಗಡೆಯವರನ್ನು ಉಭಯ ಶ್ರೀಪಾದರೂ ಗೌರವಿಸಿ ಆಶೀರ್ವದಿಸಿದರು. ದಿವಾನರಾದ ನಾಗರಾಜಾಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ ಮತ್ತು ಮಠದ ವಿದ್ವಾಂಸರು, ಅನೇಕ ಭಕ್ತರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅರ್ಹರಿಗೆ ಸೂರು ಕಲ್ಪಿಸುವ ಯಶ್ಪಾಲ್ ಸುವರ್ಣರ ಸೇವೆ ಶ್ರೀ ರಾಮನಿಗೆ ಸಂದ ಸೇವೆ: ಪೇಜಾವರ ಶ್ರೀ

ಮಲ್ಪೆ, ಜ.31: ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಮಂದಿರ ನಿರ್ಮಾಣದ ಜೊತೆ ಜೊತೆಗೆ...

ಕಾಮರ್ಸ್ ಒಲಿಂಪಿಯಾಡ್: ದೀಪೇಶ್ ದೀಪಕ್ ಶೆಣೈ ದೇಶಕ್ಕೆ12ನೇ ರ‍್ಯಾಂಕ್

ಉಡುಪಿ, ಜ.31: ಟಿ ಎ ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಕುಂಜಿಬೆಟ್ಟು...

ಅಧ್ಯಾಪಕರ ನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಗಳಿಗೆ ಏರಿಸಿದ ತೆಲಂಗಾಣ ಸರ್ಕಾರ

ಹೈದರಾಬಾದ್, ಜ.31: ತೆಲಂಗಾಣ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯಗಳಲ್ಲಿ ಮತ್ತು ಉನ್ನತ ಶಿಕ್ಷಣ...

ಹೈಡ್ರೋಜನ್ ಸಾಗಣೆಗೆ ಪೈಪ್‌ಗಳನ್ನು ಅಭಿವೃದ್ಧಿಪಡಿಸಿದ ಮೊದಲ ಭಾರತೀಯ ಉಕ್ಕಿನ ಕಂಪನಿ ಎಂಬ ದಾಖಲೆ ನಿರ್ಮಿಸಿದ ಟಾಟಾ ಸ್ಟೀಲ್

ನವದೆಹಲಿ, ಜ.31: ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಸ್ಟೀಲ್, ಹೈಡ್ರೋಜನ್ ಸಾಗಣೆಗೆ...
error: Content is protected !!