ಸಿದ್ದಾಪುರ, ಜ.31: ಜೇಸಿಐ ಶಂಕರನಾರಾಯಣ ಇದರ ವತಿಯಿಂದ ಜೇಸಿಐ ವಲಯದ ಈ ವರ್ಷದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅಭಿಯಾನದಡಿ ಸತತ 48 ವರ್ಷಗಳಿಂದ ಯಾವುದೇ ತಾಂತ್ರಿಕತೆ ಬಳಸದೆ ಅಡಿಕೆ ಕೊಯಿಲು ಹಾಗು ಔಷಧಿ ಸಿಂಪಡಣಾ ಕಾಯಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರಾದ ಶಂಕರ ನಾಯ್ಕ್ ಅಗ್ರಬೈಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೇಸಿಐ ಶಂಕರನಾರಾಯಣದ ಅಧ್ಯಕ್ಷರಾದ ಪ್ರವೀಣ್ ಬಾಳೆಕೋಡ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸೀನಿಯರ್ ಜೇಸಿ ಶಂಕರನಾರಾಯಣ ಲೆಜೆಂಡ್ನ ಅಧ್ಯಕ್ಷರಾದ ರಾಘವೇಂದ್ರ ಶೇಟ್ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಜೇಸಿಐ ಪೂರ್ವಧ್ಯಕ್ಷರಾದ ರಾಘವೇಂದ್ರ ಕುಪ್ಪಾರ್, ರಾಮಚಂದ್ರ ದೇವಾಡಿಗ, ಕೆ ಪಿ ಉಡುಪ, ಪ್ರವೀಣ್ ಚಂದ್ರ ಶೆಟ್ಟಿಗಾರ್, ಪ್ರಶಾಂತ್ ಶೆಟ್ಟಿ ಶಾಡಿಗುಂಡಿ, ಸದಸ್ಯರಾದ ಯೋಗೀಶ್ ಕಾಂಚನ್, ನಾರಾಯಣ್ ಟಿ, ಕೇಶವ್ ಮಕ್ಕಿಮನೆ, ರೇವತಿ, ವಸಂತ್ ನಾಯ್ಕ್, ಪ್ರಣವಿ, ಪ್ರಸ್ತುತಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ದೇಶಕಿ ಸುಭಿಕ್ಷ ಜೇಸಿವಾಣಿ ವಾಚಿಸಿದರು. ಲೇಡಿ ಜೇಸಿ ಅಧ್ಯಕ್ಷೆ ಪಲ್ಲವಿ ಪ್ರವೀಣ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಬಾಳೆಕೋಡ್ಲು ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ ದೇವಾಡಿಗ ವಂದಿಸಿದರು.