ಮಣಿಪಾಲ, ಜ.29: ಸಮರ್ಥ ಉಪನ್ಯಾಸಕ ವಿದ್ಯಾರ್ಥಿಯ ಜೀವನಕ್ಕೆ ಹೊಸ ಸ್ಪೂರ್ತಿ ತುಂಬುವುದರ ಜೊತೆಗೆ ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯ ಸಾಧನೆ ಮಾಡುವತ್ತ ಪ್ರೇರೇಪಿಸುತ್ತಾನೆ. ಅಂತಹ ಶಿಕ್ಷಕರು ಸಮಾಜದ ಆಸ್ತಿ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ ಆಯೋಜಿಸಿದ ವಿಷಯಾಧಾರಿತ ಉಪನ್ಯಾಸಕರನ್ (ಇತಿಹಾಸ, ವಾಣಿಜ್ಯಶಾಸ್ತ್ರ ರಾಜ್ಯಶಾಸ್ತ್ರ, ಕನ್ನಡ) 2 ದಿನಗಳ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)ಯ ಉಪನಿರ್ದೇಶಕರಾದ ಮಾರುತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಾಗಾರಕ್ಕೆ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಸರಕಾರಿ ಪ.ಪೂ. ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಿ.ಕೆ. ಮೊಗೇರ, ಜಿಲ್ಲಾ ಸಂಯೋಜಕರಾದ ವರ್ಗೀಸ್, ವಾಣಿಜ್ಯಶಾಸ್ತ್ರ ಜಿಲ್ಲಾ ಸಂಯೋಜಕರಾದ ಚಂದ್ರಕಲಾ, ರಾಜ್ಯಶಾಸ್ತ್ರ ಜಿಲ್ಲಾ ಸಂಯೋಜಕರಾದ ವಾಸು ಮೊಗೇರ, ಇತಿಹಾಸ ವಿಭಾಗದ ಜಿಲ್ಲಾ ಸಂಯೋಜಕರಾದ ಗ್ರೇಸಿ, ಕನ್ನಡ ವಿಭಾಗದ ಜಿಲ್ಲಾ ಸಂಯೋಜಕರಾದ ಉದಯ ಕುಮಾರ್ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರು ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.