ಕಾರ್ಕಳ, ಜ.27: ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ 7ನೇ ವಾರ್ಷಿಕೋತ್ಸವ ಮತ್ತು ಭಜನಾ ಮಂಗಲೋತ್ಸವ ಶ್ರೀ ಕ್ಷೇತ್ರ ಎಳ್ಳಾರೆಯಲ್ಲಿ ನಡೆಯಿತು. ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನಾ ಮಂಗಲಕ್ಕೆ ಅರ್ಚಕ ಶ್ರೀನಿವಾಸ್ ಭಟ್ ಚಾಲನೆ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಯೋಗೀಶ್ ಮಲ್ಯ, ಉದ್ಯಮಿ ದಿನೇಶ್ ಕಿಣಿ, ಶ್ರೀನಾಥ್ ಅಡಿಗ, ಭಜನಾ ಪರಿಷತ್ ಅಧ್ಯಕ್ಷ ಹರೀಶ್ ಹೆಗ್ಡೆ, ಹಿರಿಯರಾದ ಗೋಪಾಲ್ ಸೇರಿಗಾರ್, ಭಜನಾ ಮಂಡಳಿಯ ಸಂಸ್ಥಾಪಕ ದೇವೇಂದ್ರ ಕಾಮತ್ ಎಳ್ಳಾರೆ, ಅಧ್ಯಕ್ಷೆ ಶಾಂತಿ ಪ್ರಭು ಉಪಸ್ಥಿತರಿದ್ದರು. ವಿವಿಧ ಮಂಡಳಿಗಳ ಭಜನಾ ಸೇವೆಯೊಂದಿಗೆ ಮಂಗಲೋತ್ಸವವು ವೈಭವದಿಂದ ಸಂಪನ್ನಗೊಂಡಿತು.
ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ: ವಾರ್ಷಿಕ ಭಜನಾ ಮಂಗಲೋತ್ಸವ

ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ: ವಾರ್ಷಿಕ ಭಜನಾ ಮಂಗಲೋತ್ಸವ
Date: