ಪರ್ಕಳ, ಜ.27: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಚಿನ್ನದ ಪದಕ ವಿಜೇತೆ ಎಂಜಿಎಂ.ಸಂಧ್ಯಾ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಛಾಯಾ ಎಸ್.ಪೂಜಾರಿ ಇವರನ್ನು ಪರ್ಕಳ ಹೆರ್ಗ ನಾಗರಿಕರು ಅಭಿನಂದಿಸಿ ಸಂಮಾನಿಸಿದರು. ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗ, ಎಂಜಿಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಎಸ್.ದೇವಿದಾಸ್ ನಾಯ್ಕ, ಎಂಜಿಎಂ.ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ರಾಜಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಪರ್ಕಳ: ಕರಾಟೆ ಸಾಧಕಿ ಛಾಯಾ ಎಸ್.ಪೂಜಾರಿಗೆ ಸಾರ್ವಜನಿಕ ಸನ್ಮಾನ
ಪರ್ಕಳ: ಕರಾಟೆ ಸಾಧಕಿ ಛಾಯಾ ಎಸ್.ಪೂಜಾರಿಗೆ ಸಾರ್ವಜನಿಕ ಸನ್ಮಾನ
Date: