ಉಡುಪಿ, ಜ.26: ಸುನಾಗ್ ಆಸ್ಪತ್ರೆಯ ವತಿಯಿಂದ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವೈದ್ಯಾಧಿಕಾರಿಗಳು ಹಾಗೂ ನಿರ್ದೇಶಕರಾದ ಡಾ. ನರೇಂದ್ರ ಕುಮಾರ್ ಹೆಚ್.ಎಸ್ ಹಾಗೂ ಡಾ. ವೀಣಾ ನರೇಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಡಾ. ವೀಣಾ ಧ್ವಜಾರೋಹಣಗೈದರು. ಡಾ. ನರೇಂದ್ರ ಕುಮಾರ್ ಹೆಚ್.ಎಸ್ ರವರು ಗಣರಾಜ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಆಸ್ಪತ್ರೆಯ ವ್ಯವಸ್ಥಾಪಕಿ ಶೋಭಾ ಯು.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಸಿಬ್ಬಂದಿ ಶ್ರೀನಿಧಿ ವಂದಿಸಿದರು. ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುನಾಗ್ ಆಸ್ಪತ್ರೆ: ಸಂಭ್ರಮದ ಗಣರಾಜ್ಯೋತ್ಸವ
ಸುನಾಗ್ ಆಸ್ಪತ್ರೆ: ಸಂಭ್ರಮದ ಗಣರಾಜ್ಯೋತ್ಸವ
Date: