ಗಂಗೊಳ್ಳಿ: ಕುಂದಾಪುರದ ಆಲೂರು ಗ್ರಾಮದ ಅಶ್ವತ್ ಎಂಬವರ ಮನೆಯ ಮಲನಾಡು ಗಿಡ್ಡ ದೇಶಿ ತಳಿಯ ಗಂಡು ಕರು ರಾತ್ರಿ ಅಂಗಡಿಯ ಮುಂದೆ ಮಲಗಿರುವುದನ್ನು ನೋಡಿದ್ದು ಬೆಳಿಗ್ಗೆ ಕರು ಇಲ್ಲದೇ ಇರುವುದನ್ನು ನೋಡಿ ಅಲ್ಲೇ ಪಕ್ಕದಲ್ಲಿದ್ದವರ ಬಳಿ ವಿಚಾರಿಸಿದಾಗ ಬೆಳಗಿನ ಜಾವ 3:00 ಗಂಟೆಯಿಂದ 3:30 ಗಂಟೆ ಮಧ್ಯಾವಧಿಯಲ್ಲಿ ಅಪರಿಚಿತರು ಬಿಳಿ ಬಣ್ಣದ ಕಾರಿನಲ್ಲಿ ಬಂದು ಕರುವನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ.
ದನವನ್ನು ಮಾಂಸ ಮಾಡಿ ತಿನ್ನುವ ಉದ್ದೇಶದಿಂದ ಕಳವು ಮಾಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.