Saturday, January 25, 2025
Saturday, January 25, 2025

ತೆಂಕನಿಡಿಯೂರು ಕಾಲೇಜು: ಕೋ. ಚೆನ್ನಬಸಪ್ಪ ಕೃತಿಗಳ ಅವಲೋಕನ

ತೆಂಕನಿಡಿಯೂರು ಕಾಲೇಜು: ಕೋ. ಚೆನ್ನಬಸಪ್ಪ ಕೃತಿಗಳ ಅವಲೋಕನ

Date:

ಮಲ್ಪೆ, ಜ.24: ಅನ್ಯಾಯಕ್ಕೆ ಸಿಡಿಯುವ ಬೆಂಕಿಯ ಕಿಡಿಯಾಗಿ, ಅಮಾಯಕರ ಅಸಹಾಯಕ ಬದುಕಿಗೆ ಸದಾ ಮಿಡಿಯುತ್ತಿದ್ದ ನ್ಯಾಯಾಧೀಶ, ಬರಹಗಾರ, ಸಾಮಾಜಿಕ ಹೋರಾಟಗಾರ, ಕರ್ನಾಟಕದ ಏಕೀಕರಣದ ರೂವಾರಿ ಚನ್ನಬಸಪ್ಪನವರು ಒಬ್ಬ ಒಳ್ಳೆಯ ಕುಟುಂಬ ಜೀವಿಯೂ ಆಗಿ ನಮಗೆ ಕಲಿಸಿ ಹೋದ ಪಾಠಗಳು ಅತ್ಯಂತ ಮೌಲಿಕವಾದವುಗಳು ಎಂದು ಕೋ. ಚನ್ನಬಸಪ್ಪನವರ ಮಗಳು ಹಾಗೂ ‘ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನ’ದ ಅಧ್ಯಕ್ಷೆ ಶಾಂತಾ ಜಯಪ್ರಸಾದ್ ಹೇಳಿದರು. ಅವರು ಕನ್ನಡ ಪುಸ್ತಕ ಪ್ರಾಧಿಕಾರ, ಕೋ. ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇದರ ಸಹಯೋಗದಲ್ಲಿ ಆಯೋಜಿಸಿದ ‘ಸ್ವಾತಂತ್ರ್ಯ ಯೋಧ, ಹಿರಿಯ ಸಾಹಿತಿ ಕೋ. ಚನ್ನಬಸಪ್ಪನವರ ಕೃತಿಗಳ ಅವಲೋಕನ’ ಎಂಬ ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ‍್ಯಾಗಾರದ ಮೊದಲ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಜನಪರ ನ್ಯಾಯಾಧೀಶರಾಗಿ ಕೋ.ಚೆ ಎನ್ನುವ ವಿಷಯದ ಮೇಲೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆಯವರು, ಜನ್ಮತಃ ಜೀವಪರ ನ್ಯಾಯಾಧೀಶರೇ ಆಗಿದ್ದ ಕೋ. ಚೆನ್ನಬಸಪ್ಪನವರು ಜನಸಾಮಾನ್ಯರ ಅನುಭವಗಳನ್ನು ತನ್ನದಾಗಿಸಿಕೊಂಡು ಬದುಕಿದವರು ಮಾತ್ರವಲ್ಲ ಕುವೆಂಪು ಮುಂತಾದವರ ವೈಜ್ಞಾನಿಕ, ವೈಚಾರಿಕತೆಯಿಂದ ಹದಗೊಂಡ ಪ್ರಜ್ಞೆಯಲ್ಲಿ ಲೋಕವನ್ನು ಜಾತಿ, ಲಿಂಗ, ಧರ್ಮದ ಗೋಡೆಯಿಲ್ಲದೆ ಬಯಲಾಗಿಯೇ ಕಂಡವರು ಎಂದರು. ಎರಡನೆಯ ಗೋಷ್ಠಿಯಲ್ಲಿ ‘ಕೋ. ಚೆನ್ನಬಸಪ್ಪ ಅವರ ಸಾಹಿತ್ಯದಲ್ಲಿ ಪ್ರಗತಿಶೀಲತೆ ಎಂಬ ವಿಷಯದ ಕುರಿತು ಮಾತನಾಡಿದ ಉಜಿರೆ ಎಸ್ ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆಯವರು, ಕೋ. ಚನ್ನಬಸಪ್ಪನವರ ಬರಹಗಳು ಆಲಯವನ್ನು ನಿರಾಕರಿಸಿ ಕನ್ನಡದ ಶರಣ ವಿವೇಕವಾದ ಬಯಲನ್ನು ಅಪ್ಪಿಕೊಂಡವುಗಳು ಮಾತ್ರವಲ್ಲ ವೈಜ್ಞಾನಿಕ ವೈಚಾರಿಕ ತಳಹದಿಯಲ್ಲಿ ರೂಪುಗೊಂಡ ನೈತಿಕ ರಾಜಕೀಯ ಪ್ರಜ್ಞೆಯುಳ್ಳ ವಿಶ್ವಾತ್ಮಕ ಸರ್ವೋದಯ ಸಮನ್ವಯದ ಸಾಂಸ್ಕೃತಿಕ ಅನ್ವೇಷಣೆಯ ಪ್ರಗತಿಶೀಲ ಮಾದರಿಗಳು ಎಂದರು. ಜೊತೆಗೆ ‘ಕರುಣೆಯನ್ನೇ ಧರ್ಮವೆಂಬ ಜೀವಪರ ಸತ್ಯವಾಗಿ ಮಂಡಿಸುವ ಕೋ. ಚೆ. ಬರಹಗಳು ಧರ್ಮಾಂಧತೆಯನ್ನು ರೂಪಿಸುವ ಹುಸಿ ಧಾರ್ಮಿಕತೆಗೆ ಬದಲಾಗಿ ಪರಮಹಂಸ, ವಿವೇಕಾನಂದ, ಅರವಿಂದ ಹಾಗೂ ಕುವೆಂಪು ಅವರ ಸಾಮಾಜಿಕ ಆಧ್ಯಾತ್ಮವನ್ನು ಮುಂದಿಡುತ್ತವೆ ಮತ್ತು ನಿರ್ಲಕ್ಷಿತರ ಬದುಕಿನ ವಿಕಾಸದಲ್ಲಿಯೇ ನಿಜವಾದ ಪ್ರಗತಿಯನ್ನು ಕಾಣುತ್ತವೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯಡಕ ಸಪ್ರದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ, ಕನ್ನಡದಲ್ಲಿ ಗಾಂಧೀ ಮತ್ತು ಕುವೆಂಪು ಇಬ್ಬರನ್ನೂ ಆವಾಹಿಸಿಕೊಂಡು ಬದುಕಿದ ಕೋ. ಚೆ. ಮನುಷ್ಯಜಾತಿ ತಾನೊಂದೆವಲಂ ಎಂದ ಪಂಪನ ಮಾತನ್ನು ದಿಟವಾಗಿಯೂ ಬಾಳುವ ಮೂಲಕ ಕನ್ನಡದ ಪಾಲಿನ ನಿಜದ ನಾಡೋಜನಾದವರು ಎಂದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಅರ್ಚನಾ ವಂದಿಸಿದರು. ಶಾಲಿನಿ ಯು.ಬಿ. ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಉತ್ತಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜ.24: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ "ವಾಣಿಜ್ಯ ಮೇಳ -...

ಜ.25: ಉಡುಪಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಜ.24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಉಡುಪಿ...

ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು: ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ

ಉಡುಪಿ, ಜ.24: ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು...

ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಿಗೆ ಆಹ್ವಾನ

ಉಡುಪಿ, ಜ.24: ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಇವರನ್ನು ನವದೆಹಲಿಯ...
error: Content is protected !!