ಕೋಟ, ಜ.23: ಇಲ್ಲಿನ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಬಾಟ್ ಪ್ರಾಯೋಜಕತ್ವದ ಮೂಲಕ ಅಮೇರಿಕೇರ್ಸ್ ಇಂಡಿಯಾ ಫೌಂಡೇಶನ್ ಇವರು ಒದಗಿಸಲಾದ ನೂತನ ವಾರ್ಡ್, ತುರ್ತು ಚಿಕಿತ್ಸಾ ಕೊಠಡಿಗಳ ಹಾಗೂ ಸಲಕರಣೆಗಳ ಹಸ್ತಾಂತರ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಾಸುದೇವ, ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಅಮೇರಿಕೇರ್ಸ್ ಇಂಡಿಯಾ ಫೌಂಡೇಶನ್‌ನ ಉಡುಪಿ ಜಿಲ್ಲಾ ವ್ಯವಸ್ಥಾಪಕ ನವೀನ್ ಕುಮಾರ್ ಎಂ., ಗುತ್ತಿಗೆದಾರ ನಾಗರಾಜ್ ಪೈ, ಕಟ್ಟಡ ದಾನಿಗಳಾದ ನಾಗರಾಜ್ ಕಾರಂತ್, ವೈದ್ಯಧಿಕಾರಿ ಡಾ.ಸವಿತಾ ಉಪಸ್ಥಿತರಿದ್ದರು. ಫಾರ್ಮಸಿ ಅಧಿಕಾರಿ ಸೀಮಾ ಮ್ಯಾಥ್ಯೂ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ.ರಾಘವೇಂದ್ರ ರಾವ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಲಕರಣೆಗಳ ಹಸ್ತಾಂತರ
ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಲಕರಣೆಗಳ ಹಸ್ತಾಂತರ
Date: