ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ ದೇಗುಲ ಕೋಡಿ ಕನ್ಯಾಣ ಇದರ ವಾರ್ಷಿಕ ಗೆಂಡೋತ್ಸವ ಮತ್ತು ಮಂಡಲ ಪೂಜೆ ತುಲಾಭಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಶನಿವಾರ ವಾರ್ಷಿಕ ಗೆಂಡೋತ್ಸವದ ಅಂಗವಾಗಿ ಗಣಹೋಮ, ರಂಗಪೂಜೆ, ತುಳಸಿ ಪೂಜೆ, ಗೆಂಡ ಸೇವೆ, ಮಹಾ ಅನ್ನಸಂತರ್ಪಣೆ ಅದೇ ರೀತಿ ಭಾನುವಾರ ಶ್ರೀ ದೇವಿಗೆ ಮಹಾಮಂಗಳಾರತಿ, ಮಂಡಲಪೂಜೆ, ಹಣ್ಣುಕಾಯಿ, ತುಲಾಭಾರ ಹರಕೆ, ಅನ್ನಸಂತರ್ಪಣೆ, ಮಹಾಮಂಗಳಾರತಿ, ಮಹಾಬಲಿ ಪೂಜೆ, ಶೆಡಿ ಪೂಜೆ, ಬೆನಗಲ್ಲು ಪೂಜೆ, ಜೋಗಿ ಪರುಷನ ದರ್ಶನ, ಬಾಗಿಲು ಬೊಬ್ಬರ್ಯನ ದರ್ಶನ, ಅಜ್ಜಮ್ಮ ದೇವರಿಗೆ ಪುಷ್ಭಾರ್ಚನೆ ಕಾರ್ಯಕ್ರಮಗಳು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹಗಳ ಸಮ್ಮುಖದಲ್ಲಿ ಜರಗಿತು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ. ಶ್ರೀಧರ ಪುರಾಣಿಕ ತಂತ್ರಿಗಳು ನೆರವೇರಿಸಿದರು. ದೇಗುಲದ ಅರ್ಚಕ ವೃಂದ, ಆಡಳಿತ ಮಂಡಳಿ, ಊರ ಗಣ್ಯರು, ಭಕ್ತಾಧಿಗಳು ಜಾತ್ರೋತ್ಸವದಲ್ಲಿ ಭಾಗಿಯಾದರು.
ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ
ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ
Date: