ಉಡುಪಿ, ಜ.20: ಉಡುಪಿ ಜಿಲ್ಲೆಯ ಚಕ್ರತೀರ್ಥ ಸಗ್ರಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ನೂತನ ರಥಶೋಭಾ ಯಾತ್ರೆ ರವಿವಾರ ನಡೆಯಿತು.
ಗುಂಡಿಬೈಲಿನಿಂದ ಆರಂಭಗೊಂಡ ಶೋಭಾಯಾತ್ರೆ, ದೊಡ್ಡಣಗುಡ್ಡೆ ರಸ್ತೆ ತಿರುವಿನಿಂದ ದೇವಸ್ಥಾನದವರೆಗೆ ಸಾಗಿ ಬಂತು.
ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು.
ಶಾಸಕ ಯಶ್ಪಾಲ್ ಸುವರ್ಣ, ದೇವಳದ ಅಷ್ಟಬಂಧ ಬ್ರಹ್ಮಕಲಶ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಸಹಕಾರಿ ಧುರೀಣ ಜಯಕರ ಶೆಟ್ಟಿ ಇಂದ್ರಾಳಿ, ಕರಂಬಳ್ಳಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ, ಆಡಳಿತ ಮಂಡಳಿ ಅಧ್ಯಕ್ಷರಾದ ರುದ್ರಯ್ಯ ಕೆ ಆಚಾರ್ಯ, ದೇವಳದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.