Sunday, February 23, 2025
Sunday, February 23, 2025

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

Date:

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ ಮತ್ತು ರಕ್ತ ಪೂರಣ ವಿಭಾಗವು ವರ್ಫೆನ್ ಅಕಾಡೆಮಿಯ ಸಹಯೋಗದೊಂದಿಗೆ ಗುರಿ-ನಿರ್ದೇಶಿತ ರಕ್ತಸ್ರಾವ ನಿರ್ವಹಣೆಯ (ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ )ಕುರಿತು ಮಾಹಿತಿಯುಕ್ತ ವಿಚಾರ ಸಂಕಿರಣವನ್ನು ಆಯೋಜಿಸಿತು. ಈ ಕಾರ್ಯಕ್ರಮವು ವೈದ್ಯಕೀಯ ತಜ್ಞರು ಮತ್ತು ವೈದ್ಯರನ್ನು ಒಟ್ಟುಗೂಡಿಸಿ ರಕ್ತಸ್ರಾವ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರಗಳ ಬಳಕೆ, ರೋಗಿಯ ರಕ್ತ ನಿರ್ವಹಣೆ (ಪಿಬಿಎಂ) ಮತ್ತು ರೊಟೇಶನಲ್ ಥ್ರಂಬೋಎಲಾಸ್ಟೊಮೆಟ್ರಿ (ರೋಟಮ್) ಮೇಲೆ ವಿಶೇಷ ಗಮನ ಹರಿಸಲಾಯಿತು. ಶಿರ್ಡಿ ಸಾಯಿ ಬ್ಲಾಕ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ವಿಚಾರ ಸಂಕಿರಣವನ್ನು ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್ ಅವರು ಉದ್ಘಾಟಿಸಿದರು,

ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಅನಿಲ್ ಭಟ್, ವೆರ್ಫೆನ್ ಅಕಾಡೆಮಿಯ ಡಾ. ಅಜಯ್ ಗಾಂಧಿ, ಐಎಚ್‌ಬಿಟಿ (ಕೆಎಂಸಿ ಮಣಿಪಾಲ) ಪ್ರಾಧ್ಯಾಪಕಿ ಡಾ. ಶಮೀ ಶಾಸ್ತ್ರಿ, ಮತ್ತು ಐಎಚ್‌ಬಿಟಿ (ಕೆಎಂಸಿ ಮಣಿಪಾಲ) ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಗಣೇಶ್ ಮೋಹನ್ ಉಪಸ್ಥಿತರಿದ್ದರು.

ಗುರಿ-ನಿರ್ದೇಶಿತ ರಕ್ತಸ್ರಾವ ನಿರ್ವಹಣೆಯಲ್ಲಿ ರೋಟಮ್ ಪ್ರಮುಖ ಸಾಧನವಾಗಿದೆ ಎಂಬ ಕುರಿತು ಡಾ. ಅಜಯ್ ಗಾಂಧಿಯವರ ಮುಖ್ಯ ಉಪನ್ಯಾಸದೊಂದಿಗೆ ವಿಚಾರ ಸಂಕಿರಣ ಪ್ರಾರಂಭವಾಯಿತು. ರಕ್ತಸ್ರಾವದ ರೋಗಿಗಳ ಹೆಪ್ಪುಗಟ್ಟುವಿಕೆಯ ಸ್ಥಿತಿಯನ್ನು ನಿರ್ಣಯಿಸುವಲ್ಲಿ ಪಾಯಿಂಟ್-ಆಫ್-ಕೇರ್ ಪರೀಕ್ಷೆಯ ಪಾತ್ರವನ್ನು ಡಾ. ಗಾಂಧಿ ಒತ್ತಿ ಹೇಳಿದರು ಮತ್ತು ಪಿಬಿಎಂ ನ ಮೂಲ ತತ್ವ: ಕೆಂಪು ರಕ್ತ ಕಣಗಳ ದ್ರವ್ಯರಾಶಿಯನ್ನು ಉತ್ತಮಗೊಳಿಸುವುದು, ರಕ್ತದ ನಷ್ಟವನ್ನು ಕಡಿಮೆ ಮಾಡುವುದು ಮತ್ತು ರಕ್ತಹೀನತೆಗೆ ಸಹಿಷ್ಣುತೆಯನ್ನು ಹೆಚ್ಚಿಸುವುದರ ಕುರಿತು ಒತ್ತಿ ಹೇಳಿದರು.

ಡಾ. ಗಣೇಶ್ ಮೋಹನ್ ಆಸ್ಪತ್ರೆಯ ಅಭ್ಯಾಸಗಳು ಮತ್ತು ಶಿಷ್ಟಾಚಾರಗಳ ಕುರಿತು ಪ್ರಸ್ತುತಿ ನೀಡಿದರು, ರಕ್ತಪೂರಣವನ್ನು ಕಡಿಮೆ ಮಾಡುವ ಮತ್ತು ರೋಗಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ವೈಯಕ್ತಿಕ ಆರೈಕೆ ಯೋಜನೆಗಳಿಗೆ ಪುರಾವೆ ಆಧಾರಿತ ವಿಧಾನಗಳ ಕುರಿತು ಮಾತನಾಡಿದರು.

ಸಂವಾದಾತ್ಮಕ ಪ್ರಕರಣ ಆಧಾರಿತ ಚರ್ಚೆಗಳು, ಪ್ರೇಕ್ಷಕರ ಸಮೀಕ್ಷೆಗಳ ಮೂಲಕ ನೈಜ-ಪ್ರಪಂಚದ ಕ್ಲಿನಿಕಲ್ ಸನ್ನಿವೇಶಗಳನ್ನು ವಿಶ್ಲೇಷಿಸಲು ಅವಕಾಶ ಮಾಡಿಕೊಟ್ಟವು. ಡಾ. ದೀಪಿಕಾ ಚೆನ್ನಾ ನೇತೃತ್ವದ ಅಂತಿಮ ಬೆಳಗಿನ ಅಧಿವೇಶನವು ಗುರಿ-ನಿರ್ದೇಶಿತ ರಕ್ತಸ್ರಾವ ನಿರ್ವಹಣೆಯ ಆರೋಗ್ಯ ಅರ್ಥಶಾಸ್ತ್ರದ ಮೇಲೆ ಕೇಂದ್ರೀಕರಿಸಿತು, ಇದು ರೋಗಿಗಳ ಅನಾರೋಗ್ಯ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವಾಗ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ಪಿ ಬಿ ಎಂ ನ ಸಾಮರ್ಥ್ಯದ ಕುರಿತು ವಿಚಾರ ವಿನಿಮಯ ಮಾಡಿತು. ಅಂತಿಮವಾಗಿ ಮುಕ್ತ ಚರ್ಚೆಯೊಂದಿಗೆ ಸಂಕೀರಣವು ಮುಕ್ತಾಯವಾಯಿತು, ಇಲ್ಲಿ ಪ್ರೇಕ್ಷಕರಿಗೆ ಮುಕ್ತವಾಗಿ ಮಾತನಾಡಲು , ಪ್ರಶ್ನೆ ಕೇಳಲು ಅವಕಾಶ ಮತ್ತು ಭಾಗವಹಿಸಿದವರು ರೋಗಿಗಳ ನಿರ್ವಹಣೆಯಲ್ಲಿ ರೋಟಮ್ ಬಳಸುವ ವೈದ್ಯಕೀಯ ಅನುಭವಗಳನ್ನು ಹಂಚಿಕೊಂಡರು.

ಮದ್ಯಾಹ್ನದ ನಂತರದ ಅವಧಿಯ ಚರ್ಚಾ ಕೂಟದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಅರಿವಳಿಕೆ, ಶಸ್ತ್ರಚಿಕಿತ್ಸೆ, ಕ್ರಿಟಿಕಲ್ ಕೇರ್, ತುರ್ತು ಚಿಕಿತ್ಸಾ ಔಷಧಿ, ರಕ್ತಶಾಸ್ತ್ರ ಮತ್ತು ರಕ್ತಪೂರಣ ಔಷಧದ ತಜ್ಞರು ಭಾಗವಹಿಸಿದ್ದರು. ರಕ್ತಪೂರಣ ಶಾಸ್ತ್ರ, ಹೆಪ್ಪುರೋಧಕ-ಸಂಬಂಧಿತ ರಕ್ತಸ್ರಾವ ಮತ್ತು ಗುರಿ-ನಿರ್ದೇಶಿತ ಪ್ರೋಟೋಕಾಲ್‌ಗಳ ಅನುಷ್ಠಾನದಂತಹ ನಿರ್ಣಾಯಕ ಸಮಸ್ಯೆಗಳನ್ನು ಸಮಿತಿಯು ಚರ್ಚಿಸಿತು. ರೋಗಿಗಳ ರಕ್ತ ನಿರ್ವಹಣೆಯನ್ನು, ವಿಶೇಷವಾಗಿ ಸ್ಥಿರ ರೋಗಿಗಳಲ್ಲಿ, ರಕ್ತಪೂರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ, ರೋಟಮ್ /ಟಿ ಇ ಜಿ ಯ ಉಪಯುಕ್ತತೆಯನ್ನು ತಜ್ಞರು ಒತ್ತಿ ಹೇಳಿದರು.

 

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!