ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲದ ವತಿಯಿಂದ ಡಾ.ಟಿ.ಎಂ.ಎ. ಪೈ ಆಡಿಟೋರಿಯಂ ನಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಆರೋಗ್ಯ ವ್ಯವಸ್ಥೆಯಲ್ಲಿನ ವಿಧಾನಗಳ ಕುರಿತು ಕಾರ್ಯಗಾರ ನಡೆಯಿತು. ಕಾರ್ಯಗಾರವನ್ನು ಡಾ. ಶರತ್ ಕೆ. ರಾವ್, ಸಹ ಉಪಕುಲಪತಿ, ಮಾಹೆ – ಹೆಲ್ತ್ ಸೈನ್ಸ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಗಾರವನ್ನು ಆಯೋಜಿಸಿದ್ದಕ್ಕಾಗಿ ಅಭಿನಂದಿಸಿ ಶುಭ ಹಾರೈಸಿದರು.
ಮಲಾಯಾ ವಿಶ್ವವಿದ್ಯಾಲಯ, ಮಲೇಷಿಯಾದ ಪ್ರೊಫೆಸರ್ ಡಾ. ನಿರ್ಮಲಾ ಭೂಪತಿ, ಕೆ.ಎಂ.ಸಿ. ಮಣಿಪಾಲದ ಅಸೋಸಿಯೇಟ್ ಡೀನ್ ಡಾ. ನವೀನ್ ಸಾಲಿನ್ಸ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿಯ ಕೋ-ಆರ್ಡಿನೇಟರ್ ಹಾಗೂ ಸಮುದಾಯ ವೈದ್ಯಕೀಯ ವಿಭಾಗದ ಪ್ರೊಫೆಸರ್ ಡಾ. ರಂಜಿತಾ ಎಸ್. ಶೆಟ್ಟಿಯವರು ಉಪಸ್ಥಿತರಿದ್ದರು.
ಡಾ. ರಂಜಿತಾ ಎಸ್. ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ. ಅಫ್ರಾಝ್ ಜಹಾನ್ ನಿರೂಪಿಸಿದರು. ಡಾ. ಸ್ನೇಹ ಡಿ. ಮಲ್ಯ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.
ಡಾ. ನಿರ್ಮಲಾ ಭೂಪತಿ, ಡಾ. ರಂಜಿತಾ ಎಸ್ ಶೆಟ್ಟಿ, ಡಾ. ಶ್ಯಾಮಲಾ ಜಿ., ಡಾ. ಶೆರ್ಲಿ ಲುವಿಸ್ ಸಾಲಿನ್ಸ್, ಡಾ. ಚೆರಿಯನ್ ವರ್ಗೀಸ್ ಅವರು ವಿವಿಧ ವಿಷಯಗಳ ಕುರಿತು ವಿಷಯ ಮಂಡನೆ ಮಾಡಿದರು.