ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಕೊಡ ಮಾಡುವ ಮಧ್ಯಾಹ್ನದ ಉಚಿತ ಭೇೂಜನ ವ್ಯವಸ್ಥೆಗೆ ಸ್ಥಾಪಿಸಲ್ಪಟ್ಟ ಭೇೂಜನ ನಿಧಿಗೆ ಎಮ್.ಜಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿ ಕೀರ್ತಿ ಕುಮಾರಿ ಜಿಲ್ಲಾ ನೊಂದಾಣಿ ಅಧಿಕಾರಿ ಕಾರವಾರ ಇವರು ಪ್ರತಿ ವರ್ಷದಂತೆ ಈ ಶೈಕ್ಷಣಿಕ ವರ್ಷದಲ್ಲಿ ರೂಪಾಯಿ 30 ಸಾವಿರವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತರಿಗೆ ಹಸ್ತಾಂತರಿಸಿದರು. ಕಾಲೇಜಿನ ವಿಶ್ವಸ್ತ ಮಂಡಳಿಯ ಅಧ್ಯಕ್ಷ ಟಿ.ಸತೀಶ್ ಯು.ಪೈ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಿ.ಎ.ಬಿ.ಪಿ.ವರದರಾಯ ಪೈ, ಕಾರ್ಯದರ್ಶಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಟಿ. ರಂಗ ಪೈ, ನಿರ್ದೇಶಕರು ಟಿ.ಮೇೂಹನದಾಸ್ ಪೈ ಕೌಶಲ್ಯಾಭಿವೃದ್ದಿ ಕೇಂದ್ರ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ದೇವಿದಾಸ್ ನಾಯ್ಕ, ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ಹಳೆ ವಿದ್ಯಾರ್ಥಿ ಸಂಘದ ಕೇೂಶಾಧಿಕಾರಿ ದೀಪಾಲಿ ಕಾಮತ್ ಉಪಸ್ಥಿತರಿದ್ದರು.
ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ
ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ
Date: