ಬ್ರಹ್ಮಾವರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಸೈಬ್ರಕಟ್ಟೆ ಕೊಡುಗೆಯಾಗಿ ನೀಡಿದ ಸಿ.ವಿ.ರಾಮನ್ ವಿಜ್ಞಾನ ಪ್ರಯೋಗಾಲಯವನ್ನು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರಾಮಚಂದ್ರ ಮೂರ್ತಿ ಅವರು ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇಂತಹ ಪ್ರಯೋಗಾಲಯಗಳು ಅತೀ ಅಗತ್ಯ. ಆ ನಿಟ್ಟಿನಲ್ಲಿ ರೋಟರಿ ಕ್ಲಬ್ ಸೈಬ್ರಕಟ್ಟೆಯ ಕೊಡುಗೆ ಪ್ರಶಂಸನೀಯ ಎಂದು ತಿಳಿಸುತ್ತಾ ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಬ್ರಕಟ್ಟೆ ರೋಟರಿ ಅಧ್ಯಕ್ಷರಾದ ಪ್ರಸಾದ್ ಭಟ್ ವಹಿಸಿದ್ದರು.
ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಪದ್ಮನಾಭ ಕಾಂಚನ್, ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ, ಸಿ.ಆರ್ .ಪಿ ಚಂದ್ರಶೇಖರ ಮೊಗವೀರ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಸಾಧು ಸೇರಿಗಾರ್ ಬೆನಗಲ್ ಸ್ವಾಗತಿಸಿ, ವೀಣಾ ಕುಮಾರಿ ವಂದಿಸಿದರು. ವಾಣಿಶ್ರೀ, ದಿವ್ಯಾ, ಸುಪ್ರಿಯ ಸಹಕರಿಸಿದರು.