Wednesday, January 15, 2025
Wednesday, January 15, 2025

ಭಾರತೀಯರಲ್ಲಿ ಸ್ವಾಭಿಮಾನ ಉದ್ದೀಪಿಸಿದ ವಿವೇಕಾನಂದರು: ಪ್ರಸ್ತುತ ವೈ ಎನ್

ಭಾರತೀಯರಲ್ಲಿ ಸ್ವಾಭಿಮಾನ ಉದ್ದೀಪಿಸಿದ ವಿವೇಕಾನಂದರು: ಪ್ರಸ್ತುತ ವೈ ಎನ್

Date:

ಶಂಕರನಾರಾಯಣ, ಜ.15: ಸ್ವಾಮಿ ವಿವೇಕಾನಂದರು ತಮ್ಮ ಕಾಲದಲ್ಲಿ ವಿದ್ಯಾವಂತರಲ್ಲಿ ತಮ್ಮ ಪರಂಪರೆಯ ಕುರಿತು ಕೀಳರಿಮೆ, ಅವಿಶ್ವಾಸ ಹಾಗೂ ಅವಿದ್ಯಾವಂತರಲ್ಲಿ ವೇದಾಂತದ ಕುರಿತ ಅಜ್ಞಾನದಿಂದ ಆತ್ಮವಿಶ್ವಾಸ ನಾಶವಾಗಿರುವುದನ್ನು ಗಮನಿಸಿದರು. ಜನರು ಅಭಿಮಾನ ಶೂನ್ಯತೆಯಿಂದ ಪಾಶ್ಚಾತ್ಯ ಸಂಸ್ಕೃತಿಯೇ ಶ್ರೇಷ್ಠ ಎಂಬುದನ್ನು ಒಪ್ಪಿಕೊಂಡು ಮಾನಸಿಕ ದಾಸ್ಯಕ್ಕೆ ಒಳಗಾಗಿದ್ದರು. ಆದರೆ ಪಾಶ್ಚಾತ್ಯ ಸಂಸ್ಕೃತಿಗಿಂತಲೂ ನಮ್ಮ ಸಂಸ್ಕೃತಿಯಲ್ಲಿ ಉದಾತ್ತವಾದ, ಮಹತ್ತರವಾದ ವಿಚಾರಗಳ ಮಾರ್ಗಗಳು ಇದೆ ಎಂಬುದನ್ನು ಮರೆತಿದ್ದರು. ಹಾಗಾಗಿ ಭಾರತೀಯರಲ್ಲಿ ಹಾಗೂ ವಿಶ್ವದಾದ್ಯಂತ ಈ ಕುರಿತ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ವಿವೇಕಾನಂದರು ತಮ್ಮ ವಿಚಾರಧಾರೆಗಳಿಂದ ಮಾಡಿದರು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿನ ರಾಜ್ಯಶಾಸ್ತ್ರ ವಿಭಾಗದ ಮುಖಸ್ಥ ಪ್ರಸ್ತುತ ವೈ.ಎನ್ ಹೇಳಿದರು.

ಅವರು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದ ವತಿಯಿಂದ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್, ವಿವೇಕಾನಂದರ ವಿಚಾರಧಾರೆಗಳು ಇಂದಿನ ಯುವಜನಾಂಗಕ್ಕೆ ಸ್ಪೂರ್ತಿಯಾಗಿದೆ. ಅವರ ಉದಾತ್ತವಾದ ಆದರ್ಶ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸನ್ನು ಪಡೆಯಬೇಕು ಎಂದು ಕರೆ ನೀಡಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ಪ್ರಜ್ಞಾ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕ ರಮೇಶ್ ಎನ್ ಎಸ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗ ಸಹಾಯಕ ಪ್ರಾಧ್ಯಾಪಕಿ ಪ್ರವೀಣ ಎಮ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು- 41.2 ಮಿಮೀ ಮಳೆ

ಉಡುಪಿ, ಜ.15: ಉಡುಪಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು ಕಾಪು...

ಉಚಿತ ನೇತ್ರ ತಪಾಸಣಾ ಶಿಬಿರ, ರಸ್ತೆ ಸುರಕ್ಷತಾ ಜಾಗೃತಿ ಜಾಥ

ಕೋಟ, ಜ.15: ಪ್ರಸ್ತುತ ದಿನಗಳಲ್ಲಿ ರಸ್ತೆ ಅವಘಡಗಳು ಹೆಚ್ಚುತ್ತಿವೆ, ಇದಕ್ಕೆ ಕಾರಣ...

ಮಾರ್ಕ್ ಜುಕರ್‌ಬರ್ಗ್ ಚುನಾವಣಾ ಹೇಳಿಕೆ- ಮೆಟಾ ಕ್ಷಮೆಯಾಚನೆ

ಯು.ಬಿ.ಎನ್.ಡಿ., ಜ.15: ಮಾರ್ಕ್ ಜುಕರ್‌ಬರ್ಗ್ ಅವರ ಭಾರತೀಯ ಚುನಾವಣಾ ಹೇಳಿಕೆಗಳಿಗೆ ಮೆಟಾ...

ಶೀಘ್ರದಲ್ಲೇ ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಉತ್ಪಾದನಾ ಘಟಕ

ಬೆಂಗಳೂರು, ಜ.15: ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (ಕೆಎಸ್‌ಡಿಎಲ್‌) ಸಂಸ್ಥೆಯು ವಿಜಯಪುರದ...
error: Content is protected !!