ಕೊಡವೂರು, ಜ.15: ಕೊಡವೂರು ಗ್ರಾಮದಲ್ಲಿ ಸಂಸ್ಕಾರಯುತವಾದ ಶಿಕ್ಷಣ ಮಾರ್ಗದರ್ಶನ ಭಜನೆ ಭಗವದ್ಗೀತೆ ಯೋಗದಂತಹ ಶಿಕ್ಷಣವನ್ನು ಶಿಶುಮಂದಿರದ ಮುಖಾಂತರ ಮುಂದಿನ ಪೀಳಿಗೆಗೆ ನೀಡಬೇಕು, ತನ್ಮೂಲಕ ಮುಂದಿನ ಪೀಳಿಗೆಗೆ ದೇಶ ಧರ್ಮದ ಪರವಾಗಿ ಜೀವನ ನಡೆಸಲು ಅನುಕೂಲವಾಗಬೇಕು ಎಂದು ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದರು. ಕೊಡುವೂರಿನಲ್ಲಿ ಕೇಶವ ಜ್ಞಾನ ಮಂದಿರದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆರೆ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರಾದ ದೇವರಾಜ್ ಸುವರ್ಣ, ಶ್ರೀಧರ್ ಕಾನಂಗಿ, ಪ್ರಭಾತ್, ಸುಧಾಕರ್ ಕುಂದರ್, ದಿನೇಶ್ ಹರಿಹರನಗರ, ಚಂದ್ರಕಾಂತ್, ಸಂದೇಶ, ವಿನಯ್ ಗರ್ಡೆ, ರವಿರಾಜ್, ದಯಾನಂದ್ ಕೋಟ್ಯಾನ್, ಗಣೇಶ್ ರಾವ್, ಪ್ರಸಾದ್ ಭಟ್, ಮೋಹನ್ ಭಟ್, ರಾಜೇಂದ್ರ ಬಾಚನಬೈಲು, ಅಶೋಕ್ ಶೆಟ್ಟಿಗಾರ್, ಯಶೋಧ, ಗುಣವತಿ, ಪ್ರೀತಿ ಮುಂತಾದವರು ಉಪಸ್ಥಿತರಿದ್ದರು.
ಕೊಡವೂರು: ಕೇಶವ ಜ್ಞಾನ ಮಂದಿರಕ್ಕೆ ಶಿಲಾನ್ಯಾಸ
ಕೊಡವೂರು: ಕೇಶವ ಜ್ಞಾನ ಮಂದಿರಕ್ಕೆ ಶಿಲಾನ್ಯಾಸ
Date: